See also 2gutter
1gutter ಗಟರ್‍
ನಾಮವಾಚಕ
  1. (ವಿರಳ ಪ್ರಯೋಗ) ತೋಡು; ನೀರು ದಾರಿ; ನೀರಿನ ಜಾಡು; ಹರಿಯುವ ನೀರಿನಿಂದಾದ ಜಾಡು.
  2. ಸೂರುಬಾನೆ; ಸೂರು ದೋಣಿ; ಮಳೆಯ ನೀರು ಹರಿದು ಹೋಗುವಂತೆ ಸೂರಿನ ಕೆಳಗಿಟ್ಟಿರುವ ಮರಿಗೆ.
  3. ಚರಂಡಿ; ಮೋರಿ; ಗಟಾರ; ರಸ್ತೆಯ ಬದಿಯಲ್ಲಿರುವ ಕಾಲುವೆ.
  4. ಕಾಲುವೆ; ತೂಬು; ದ್ರವ ಹರಿದುಹೋಗುವುದಕ್ಕಾಗಿ ಮಾಡಿರುವ ತೆರೆದ ನಾಲೆ.
  5. ಗಾಡಿ; ಚಡಿ; ತೋಡು.
  6. (ಪುಸ್ತಕಗಳಲ್ಲಿನ) ಎರಡು ಎದುರು ಬದುರು ಪುಟಗಳ ನಡುವೆ ಇರುವ ಮಾರ್ಜಿನ್‍ಗಳ ಜಾಗ.
  7. ಹಲ್ಕಾ – ಕೊಂಪೆ, ಗುಂಡಿ; ಚರಂಡಿ; ಗಟಾರ; ಕೊಳಚೆ, ಅನೈತಿಕತೆ, ಅಪರಾಧ ಮೊದಲಾದ ಅಯೋಗ್ಯ ಬದುಕಿನ ಯಾ ನಡತೆಯ ಸ್ಥಿತಿ ಯಾ ಆವಾಸ: the language of the gutter ಗಟಾರದ ಭಾಷೆ; ಹಲ್ಕಾಮಾತು.
ನುಡಿಗಟ್ಟು
  1. take child etc., out of gutter ಮಗು ಮೊದಲಾದವನ್ನು ಬಡತನದಿಂದ ಬಿಡಿಸು, ಮೇಲೆತ್ತು, ಪಾರುಮಾಡು; ದಾರಿದ್ರ್ಯದ ಪರಿಸರದಿಂದ ಮಗು ಮೊದಲಾದವರನ್ನು ಬಿಡಿಸು.
  2. the gutter = 1gutter (7).
See also 1gutter
2gutter ಗಟರ್‍
ಸಕರ್ಮಕ ಕ್ರಿಯಾಪದ
  1. (ನೀರಿನ ಹರಿವಿನಿಂದ) ಕಾಲುವೆ ತೋಡು; ಚರಂಡಿ ತೆಗೆ; ಮೋರಿ ಮಾಡು: a heavy rain guttering the field ಹೊಲದಲ್ಲಿ ಕಾಲುವೆ ಮಾಡುವಂಥ ಭಾರಿ ಮಳೆ.
  2. ಚರಂಡಿ, ಮೋರಿ – ಒದಗಿಸು.
  3. (ಕಣ್ಣೀರು ಮೊದಲಾದವುಗಳ ವಿಷಯದಲ್ಲಿ) ಗೆರೆ (ಗುರುತು) ಮಾಡು.
ಅಕರ್ಮಕ ಕ್ರಿಯಾಪದ
  1. ಕೋಡಿ ಹರಿ; ಕಾಲುವೆಯಾಗಿ ಹರಿ.
  2. (ಮೋಂಬತ್ತಿಯ ವಿಷಯದಲ್ಲಿ) (ಒಂದು ಕಡೆ ಕಾಲುವೆ ಬಿದ್ದು, ಮೇಣ ಮೊದಲಾದವು ಹರಿದು) ಕರಗಿಹೋಗು: the candles flickered and guttered down ಮೋಂಬತ್ತಿಗಳು ಮಿಣುಕು ಮಿಣುಕುತ್ತಾ ಉರಿದು ಬೇಗ ಕರಗಿಹೋದವು.