See also 2gust  3gust
1gust ಗಸ್ಟ್‍
ನಾಮವಾಚಕ
  1. ಹೊಯ್ಗಾಳಿ; ನುಗ್ಗುಗಾಳಿ; ಥಟ್ಟನೆ ಬಿರುಸಿನಿಂದ ನುಗ್ಗುವ ಗಾಳಿ.
  2. (ಮಳೆ, ಬೆಂಕಿ, ಶಬ್ದ ಯಾ ಭಾವೋದ್ರೇಕಗಳ) ಹೊಡೆತ; ಜಡಿತ; ಸ್ಫೋಟ; ರಭಸದ ಹೊಮ್ಮಿಕೆ; ಉದ್ರೇಕ; ಉದ್ವೇಗ: unruly gusts of passion ಹದ್ದು ಮೀರಿದ ರಾಗೋದ್ರೇಕಗಳು.
See also 1gust  3gust
2gust ಗಸ್ಟ್‍
ಅಕರ್ಮಕ ಕ್ರಿಯಾಪದ
  1. (ಗಾಳಿಯ ವಿಷಯದಲ್ಲಿ) ಥಟ್ಟನೆ ಬಿರುಸಾಗಿ – ಬೀಸು, ನುಗ್ಗು.
  2. (ಮಳೆ, ಬೆಂಕಿ, ಶಬ್ದ, ರಾಗಭಾವಗಳ ವಿಷಯದಲ್ಲಿ) ಹೊಡಿ; ಸ್ಫೋಟಿಸು; ರಭಸವಾಗಿ – ಹೊಮ್ಮು, ಕೆರಳು, ಉದ್ರೇಕಗೊಳ್ಳು: pride gusts up again ಗರ್ವ ಮತ್ತೆ ಕೆರಳುತ್ತದೆ.
See also 1gust  2gust
3gust ಗಸ್ಟ್‍
ನಾಮವಾಚಕ

(ಪ್ರಾಚೀನ ಪ್ರಯೋಗಯಾ ಕಾವ್ಯಪ್ರಯೋಗ)

  1. ರಸನೇಂದ್ರಿಯ; ಆಸ್ವಾದನಶಕ್ತಿ.
  2. ವಿಶೇಷ ರುಚಿ; ಅಭಿರುಚಿ; ವಿಶಿಷ್ಟಾಭಿರುಚಿ; ಇಷ್ಟ(ವಾದ) ರುಚಿ: have a gust of ಇಷ್ಟಪಡು; ಮೆಚ್ಚು. gust of the things of the world ಪ್ರಾಪಂಚಿಕ ವಸ್ತುಗಳಲ್ಲಿ ವಿಶೇಷ ಅಭಿರುಚಿ.
  3. ರುಚಿ; ಸವಿ; ರಸ.