gunner ಗನರ್‍
ನಾಮವಾಚಕ
  1. (ಮುಖ್ಯವಾಗಿ ಸೈನಿಕನ ಹುದ್ದೆಯ ಹೆಸರಾಗಿ) ಗೋಲಂದಾಜ ತೋಪುಗಾರ; ಫಿರಂಗಿದಾರ; ಫಿರಂಗಿ – ಸೈನಿಕ ಯಾ ಅಧಿಕಾರಿ.
  2. (ನೌಕಾಯಾನ) ತೋಪಧಿಕಾರಿ; ತೋಪುಖಾನೆ, ಮದ್ದಿನ ಮನೆ, ಮೊದಲಾದವುಗಳ ಅಧಿಕಾರಿ.
  3. (ಕಾಡುಪ್ರಾಣಿ, ಹಕ್ಕಿ, ಮೊದಲಾದವುಗಳ) ಬೇಟೆಗಾರ; ಷಿಕಾರಿ(ಯವ).
  4. ವಿಮಾನ ಕೋವಿಗಾರ; ಬಂದೂಕು ಹಾರಿಸುವ ವಿಮಾನ ಚಾಲಕ ವರ್ಗದ ಸದಸ್ಯ.
ಪದಗುಚ್ಛ

Master Gunner (ದೊರೆಯ) ಆಯುಧಾಗಾರದ ಅಧಿಕಾರಿ; ಶಸ್ತ್ರಾಸ್ತ್ರದ ಉಗ್ರಾಣವನ್ನು ನೋಡಿಕೊಳ್ಳುವ ಅಧಿಕಾರಿ.

ನುಡಿಗಟ್ಟು
  1. gunner’s daughter (ಹಾಸ್ಯ ಪ್ರಯೋಗ) ಚಡಿಫಿರಂಗಿ; ಚಡಿಯೇಟನ್ನು ಕೊಡಲು ನಾವಿಕರನ್ನು ಬಿಗಿಯುತ್ತಿದ್ದ ಫಿರಂಗಿ.
  2. kiss or marry the gunner’s daughter ಚಡಿಯೇಟು – ತಿನ್ನು, ಹೊಡೆಸಿಕೊ.