guilty ಗಿಲ್ಟಿ
ಗುಣವಾಚಕ
  1. ತಪ್ಪಿತ ಮಾಡಿರುವ; ತಪ್ಪಿತಸ್ಥನಾದ; ಅಪರಾಧ ಮಾಡಿರುವ; ಅಪರಾಧಿಯಾದ; ತಕ್ಸೀರು ಮಾಡಿರುವ; ತಕಿರುದಾರನಾದ; ದೋಷವೆಸಗಿರುವ; ದೋಷಿಯಾದ.
  2. ಶಿಕ್ಷಾರ್ಹನಾದ; ಶಿಕ್ಷೆಗೆ ಯೋಗ್ಯನಾದ; ದಂಡಾರ್ಹ; ದಂಡನೀಯ; ದಂಡ್ಯ; ದಂಡನೆಗೆ ಅರ್ಹನಾದ.
  3. ಅಪರಾಧ ಪ್ರಜ್ಞೆಯುಳ್ಳ; ತನ್ನ ತಪ್ಪಿತದ ಅರಿವಿರುವ; ತನ್ನ ತಪ್ಪಿತವನ್ನು ಬಲ್ಲ; ತಾನು ತಪ್ಪಿತಸ್ಥನೆಂದು ಅರಿತ; ತಪ್ಪಿತ ಮನಸ್ಸಿನ: guilty conscience ಅಪರಾಧ ಪ್ರಜ್ಞೆ; ಕಳ್ಳಮನಸ್ಸು.
  4. (ಯಾವುದೇ ಗೊತ್ತಾದ, ನಿರ್ದಿಷ್ಟ) ಅಪರಾಧ ಮಾಡಿರುವ.
  5. ಅಪರಾಧ ಪ್ರೇರಿತ; ಅಪರಾಧ ಮಾಡುವ ಸ್ವಭಾವದಿಂದ, ಭಾವನೆಯಿಂದ – ಪ್ರೇರಿತವಾದ, ಪ್ರಚೋದಿತವಾದ.
ಪದಗುಚ್ಛ
  1. guilty, not guilty (ಕೋರ್ಟು ವಿಚಾರಣೆಗಳಲ್ಲಿ ಕೊಡುವ ತೀರ್ಪುಗಳಲ್ಲಿ) ತಪ್ಪಿತಸ್ಥ, ನಿರ್ದೋಷಿ.
  2. guilty of = guilty (4).