guiltless ಗಿಲ್ಟ್‍ಲಿಸ್‍
ಗುಣವಾಚಕ
  1. ತಪ್ಪಿತವಿಲ್ಲದ; ತಪ್ಪಿತಸ್ಥನಲ್ಲದ; ನಿರಪರಾಧಿ; ಅಪರಾಧ ಮಾಡಿರದ; ನಿರ್ದೋಷಿ; ದೋಷಿಯಲ್ಲದ; ಅಪರಾಧಿಯಲ್ಲದ; ನಿರಪರಾಧಿಯಾದ.
  2. (ಯಾವುದೇ ವಿಷಯದ) ಅರಿವಿಲ್ಲದ; ತಿಳಿವಳಿಕೆ, ಜ್ಞಾನ, ಪರಿಚಯ, ಗಂಧ – ಇಲ್ಲದ: guiltless of grammar ವ್ಯಾಕರಣದ ಗಂಧವೇ ಇಲ್ಲದ.
  3. (ಯಾವುದೇ ವಸ್ತುವನ್ನು) ಹೊಂದಿಲ್ಲದ; ಪಡೆದಿಲ್ಲದ: guiltless of moustache ಮೀಸೆಯಿಲ್ಲದ.