See also 2guillotine
1guillotine ಗಿಲಟೀನ್‍
ನಾಮವಾಚಕ

ಗಿಲೊಟೀನ್‍:

  1. ತಲೆಗಡುಕ (ಯಂತ್ರ); ಶಿರಚ್ಛೇದಕ(ಯಂತ್ರ); ಭಾರವಾದ ಕತ್ತಿಯಲಗು ಗಾಡಿಗಳಲ್ಲಿ ಜಾರಿಕೊಂಡು ಇಳಿಯುವಂತೆ ಅಳವಡಿಸಿರುವ ತಲೆಕಡಿಯುವ ಯಂತ್ರ. Figure: guillotine-1
  2. ಕಿರುನಾಲಗೆ ಮೊದಲಾದವನ್ನು ಕತ್ತರಿಸಲು ಬಳಸುವ ಶಸ್ತ್ರಚಿಕಿತ್ಸೆಯ ಉಪಕರಣ.
  3. ಕಾಗದ ಮೊದಲಾದವನ್ನು ಕತ್ತರಿಸಲು ಬಳಸುವ (ವಿವಿಧ) ಯಂತ್ರಸಾಧನ.
  4. (ಬ್ರಿಟಿಷ್‍ ಪ್ರಯೋಗ) (ಪಾರ್ಲಿಮೆಂಟ್‍) ಅಡ್ಡಿಯ ಕಡಿತ; ಅಡ್ಡಿ ನಿವಾರಣೆ; ಪ್ರತಿರೋಧ ನಿವಾರಣೆ; ಮಸೂದೆಯ ಭಾಗಗಳು ಮೊದಲಾದವುಗಳ ಚರ್ಚೆಯಲ್ಲಿ, ಸದಸ್ಯರು ಬೇಕೆಂದೇ ಒಡ್ಡುವ ಅಡ್ಡಿಯಿಂದ ಕಾಲವಿಳಂಬವಾಗುವುದನ್ನು ತಪ್ಪಿಸಲು ವೋಟುಮಾಡುವ ಕಾಲಗಳನ್ನು ಮೊದಲೇ ಗೊತ್ತುಪಡಿಸುವ ವಿಧಾನ.
See also 1guillotine
2guillotine ಗಿಲಟೀನ್‍
ಸಕರ್ಮಕ ಕ್ರಿಯಾಪದ

ಗಿಲೊಟೀನ್‍ಗೆ ಹಾಕು:

  1. ಗಿಲೊಟೀನಿನಿಂದ ತಲೆ ಕತ್ತರಿಸು.
  2. (ಬ್ರಿಟಿಷ್‍ ಪ್ರಯೋಗ) (ಪಾರ್ಲಿಮೆಂಟ್‍) ಗಿಲೊಟೀನ್‍ ವಿಧಾನವನ್ನು ಪ್ರಯೋಗಿಸಿ ಅಡ್ಡಿಯನ್ನು ತಪ್ಪಿಸು.