See also 2guide
1guide ಗೈಡ್‍
ನಾಮವಾಚಕ
  1. ಮಾರ್ಗದರ್ಶಿ; ಮಾರ್ಗದರ್ಶಕ; ದಾರಿತೋರುಗ; ದಾರಿ ತೋರಿಸುವವನು.
  2. ಪ್ರವಾಸಿ ಮಾರ್ಗದರ್ಶಕ; ಪ್ರಯಾಣಿಕನಿಗೆ ಯಾ ಪ್ರವಾಸಿಗೆ ಹಣ ಪಡೆದು ದಾರಿ, ಪ್ರೇಕ್ಷಣೀಯ ಸ್ಥಳ, ಮೊದಲಾದವನ್ನು ತೋರಿಸುವವನು.
  3. (ಮುಖ್ಯವಾಗಿ ಸ್ವಿಟ್ಸರ್ಲಂಡ್‍ ಮೊದಲಾದ ದೇಶಗಳಲ್ಲಿ) ವೃತ್ತಿಪರ ಪರ್ವತಾರೋಹಿ; ಪರ್ವತಾರೋಹಣ ವೃತ್ತಿಯವನು.
  4. (ಬಹುವಚನ ದಲ್ಲಿ) ಮಾರ್ಗದರ್ಶಕ ದಳ; ಮಾರ್ಗದರ್ಶನ ಮಾಡಲು ಯಾ ಪೂರ್ವಭಾವಿ ಪರಿಶೀಲನ ನಡೆಸಲು, ಕೆಲವು ಸೈನ್ಯಗಳಲ್ಲಿ ರಚಿಸಿರುವ ವಿಶೇಷ ದಳ, ತಂಡ.
  5. ಗೈಡು:
    1. (ಸೈನ್ಯ) ತನ್ನ ಚಲನವಲನಗಳಿಂದ ದಳದ ಇತರ ಸೈನಿಕರು ತಮ್ಮ ಚಲನವಲನಗಳನ್ನು ಹೊಂದಿಸಿಕೊಳ್ಳುವಂತೆ, ನಿಯಂತ್ರಿಸಿಕೊಳ್ಳುವಂತೆ ಮಾರ್ಗದರ್ಶನ ನೀಡುವ ಸೈನಿಕ; ಮಾರ್ಗದರ್ಶಕ ಸೈನಿಕ.
    2. ಮಾರ್ಗದರ್ಶಕ ವಾಹನ; ಇತರ ವಾಹನಗಳು ತಮ್ಮ ಚಲನ ವಲನಗಳನ್ನು ಸರಿ ಹೊಂದಿಸಿಕೊಳ್ಳುವಂತೆ ಮಾರ್ಗದರ್ಶನ ನೀಡುವ ವಾಹನ.
    3. ಮಾರ್ಗದರ್ಶಕ ನೌಕೆ; ಇತರ ನೌಕೆಗಳು ತಮ್ಮ ಚಲನವಲನಗಳನ್ನು ಸರಿಹೊಂದಿಸಿಕೊಳ್ಳುವಂತೆ ಮಾರ್ಗದರ್ಶನ ನೀಡುವ ಹಡಗು.
  6. ಸಲಹೆಗಾರ; ಸಲಹಾಕಾರ; ವ್ಯಕ್ತಿಗೆ ಹಿತನುಡಿ ಹೇಳುವವನು.
  7. ಆದರ್ಶ; ಪ್ರಮಾಣ; ಮಾರ್ಗದರ್ಶಕ ತತ್ತ್ವ: scripture is our guide ಶಾಸ್ತ್ರವೇ ನಮಗೆ ಪ್ರಮಾಣ. the feelings are a bad guide ಭಾವನೆಗಳು ಕೆಟ್ಟ ಮಾರ್ಗದರ್ಶಕ (ತತ್ತ್ವ)ಗಳು.
  8. (Guide) (ಬ್ರಿಟಿಷ್‍ ಪ್ರಯೋಗ) ಗರ್ಲ್‍ ಗೈಡು; ಬಾಲಿಕಾ ಚಮೂ; ಚಮೂ ಬಾಲಿಕೆ.
  9. ಗೈಡು; ಕೈಪಿಡಿ; ಮಾರ್ಗದರ್ಶಿ; ಮಾರ್ಗದರ್ಶನ (ಪುಸ್ತಕ); ಒಂದು ವಿಷಯದ ವ್ಯಾಸಂಗಕ್ಕೆ ಸಹಾಯಕವಾಗುವ, ಅದರ ಮೂಲ ತತ್ತ್ವಗಳ ಪರಿಚಯ ಮಾಡಿಕೊಡುವ ಪುಸ್ತಕ.
  10. (ಒಂದು ನಗರ, ಅದರ ಚರ್ಚು, ವಸ್ತು ಸಂಗ್ರಹಾಲಯ, ಮೊದಲಾದವುಗಳ ಬಗೆಗೆ ತಿಳಿವಳಿಕೆ ಕೊಡುವ) ಗೈಡು; ಮಾರ್ಗದರ್ಶಕ (ಪುಸ್ತಕ).
  11. (ಯಂತ್ರಶಾಸ್ತ್ರ) ಚಾಲಕದಂಡ; ಯಾವುದೇ ಯಂತ್ರದ ಯಾ ಯಂತ್ರಭಾಗದ ಚಲನವನ್ನು ನಿಯಂತ್ರಿಸುವ ಕಂಬಿ, ದಂಡ, ಮೊದಲಾದವು.
  12. (ಯಂತ್ರಶಾಸ್ತ್ರ) ನಿಯಂತ್ರಕ; ಸಲಕರಣೆಗಳ ಕಾರ್ಯವನ್ನು ನಿಯಂತ್ರಿಸುವ ಸಾಧನ.
  13. ನಿರ್ದೇಶಕ; ಒಂದು ಸ್ಥಾನವನ್ನು ಗುರುತಿಸುವ ಯಾ ಕಣ್ಣಿಗೆ ನಿರ್ದೇಶಕವಾಗಿರುವ ವಸ್ತು.
ಪದಗುಚ್ಛ

King’s or Queen’s Guide ರಾಜನ ಯಾ ರಾಣಿಯ ಮಾರ್ಗದರ್ಶಿ; ರಾಜನ ಯಾ ರಾಣಿಯ ಆಸ್ಥಾನದಲ್ಲಿ ಅತ್ಯಂತ ಹೆಚ್ಚಿನ ಪರಿಣತಿ, ದಕ್ಷತೆ ಉಳ್ಳ ಅಧಿಕಾರಿಗೆ ಕೊಡುವ ಮಾರ್ಗದರ್ಶಿ ಪದವಿ.

See also 1guide
2guide ಗೈಡ್‍
ಸಕರ್ಮಕ ಕ್ರಿಯಾಪದ
  1. ದಾರಿತೋರಿಸು; ಮಾರ್ಗದರ್ಶಿಯಾಗು; ಮಾರ್ಗ ನಿರ್ದೇಶಿಸು; ಪಥತೋರು; ಮಾರ್ಗದರ್ಶನ ಮಾಡು.
  2. (ದಾರಿ ತೋರಿಸಲು) ಮುಂದೆ ಹೋಗು; ಮುಂದಾಳಾಗು.
  3. (ವಾಹನ, ವಸ್ತು, ಪ್ರಾಣಿ, ವ್ಯಕ್ತಿ, ಘಟನೆಗಳು, ಮೊದಲಾದವುಗಳ ಗತಿಯನ್ನು, ಮಾರ್ಗವನ್ನು) ರೂಪಿಸು; ನಿಯಂತ್ರಿಸು; ನಿರ್ದೇಶಿಸು.
  4. (ವ್ಯಕ್ತಿಗಳು, ಕ್ರಿಯೆಗಳು, ಅಭಿಪ್ರಾಯಗಳು, ಮೊದಲಾದವುಗಳಿಗೆ) ದಿಗ್ದರ್ಶನಮಾಡು.
  5. (ಸೂಚನೆಗಳು, ತತ್ತ್ವಗಳು, ಅಂತಃಪ್ರೇರಣೆಗಳು, ಮೊದಲಾದವುಗಳ ವಿಷಯದಲ್ಲಿ) ಮಾರ್ಗ ನಿರ್ದೇಶಿಸು; ಸರಿಯಾದ ದಿಶೆಯಲ್ಲಿ ವರ್ತಿಸುವಂತೆ ಮಾಡು: Lord guide my judgement! ದೇವರು ನನ್ನ ನಿರ್ಣಯ ಶಕ್ತಿಯನ್ನು ನಿರ್ದೇಶಿಸಲಿ!
  6. (ರಾಷ್ಟ್ರ ಮೊದಲಾದವುಗಳ) ಕಾರ್ಯ ನಿರ್ವಹಿಸು; ಕಾರುಬಾರು ನಡೆಸು; ವ್ಯವಹಾರಗಳನ್ನು ನಿರ್ವಹಿಸು.