See also 2guess
1guess ಗೆಸ್‍
ಸಕರ್ಮಕ ಕ್ರಿಯಾಪದ
  1. (ಅಳತೆ ಯಾ ವಿವರವಾದ ಲೆಕ್ಕಾಚಾರ ಮಾಡದೆ) ಅಂದಾಜು ಮಾಡು; ಊಹೆಕಟ್ಟು; ಊಹಿಸು.
  2. ( ಅಕರ್ಮಕ ಕ್ರಿಯಾಪದ ಸಹ) ಸಂಭಾವ್ಯವೆಂದು ಭಾವಿಸು; ಆಗಬಹುದೆಂದು, ಸಂಭವವೆಂದು – ಯೋಚಿಸು; ಆಲೋಚಿಸು.
  3. (ಒಂದರ ಸ್ವರೂಪ) ಗೊತ್ತಿದೆಯೆಂದು – ಅಂದುಕೊ, ಭಾವಿಸು.
  4. (ಒಂದರ ಬಗ್ಗೆ) ಊಹಾಕಲ್ಪನೆ ಮಾಡು; ಊಹೆ ಕಲ್ಪಿಸು.
  5. ಊಹಾಪೋಹಮಾಡು.
  6. (ಒಂದು ವಿಷಯದಲ್ಲಿಅಭಿಪ್ರಾಯ ಸರಿಯೋ ತಪ್ಪೋ) ಧೈರ್ಯವಾಗಿ ಹೇಳಿಬಿಡು ( ಅಕರ್ಮಕ ಕ್ರಿಯಾಪದ ಸಹ).
  7. (ತೊಡಕಾದ ರಹಸ್ಯಕ್ಕೆ ಉತ್ತರವನ್ನು, ಸಮಸ್ಯೆಗೆ ಪರಿಹಾರವನ್ನು) ಸರಿಯಾಗಿ – ತರ್ಕಿಸು, ಊಹಿಸು, ಅನುಮಾನಿಸು ( ಅಕರ್ಮಕ ಕ್ರಿಯಾಪದ ಸಹ).
ಪದಗುಚ್ಛ
  1. guess at (ಯಾವುದೇ ವಿಷಯದಲ್ಲಿ) ಊಹಿಸು; ಊಹೆಮಾಡು.
  2. I guess (ಅಮೆರಿಕನ್‍ ಪ್ರಯೋಗ) (ಅದು ಸಂಭವವೆಂದು) ನನಗೆ ಅನ್ನಿಸುತ್ತದೆ. ತೋರುತ್ತದೆ.
  3. keep person guessing (ಆಡುಮಾತು) ಒಬ್ಬನನ್ನು ಸಂಶಯದಲ್ಲಿ, ಅನಿಶ್ಚಿತತೆಯಲ್ಲಿ ಇಟ್ಟಿರು.
See also 1guess
2guess ಗೆಸ್‍
ನಾಮವಾಚಕ

(ಸರಿಸುಮಾರಾದ, ಹೆಚ್ಚುಕಡಮೆ ಸರಿಯಾದ) ಅಂದಾಜು; ಊಹೆ; ಕಲ್ಪನೆ.

ಪದಗುಚ್ಛ
  1. anybody’s guess.
  2. anyone’s guess = ಪದಗುಚ್ಛ \((1)\).
  3. by guess ಊಹೆಯಿಂದ; ಅಂದಾಜಿನಿಂದ; ಲೆಕ್ಕಾಚಾರವಿಲ್ಲದೆ.
  4. by guess and by God(frey) ಬರಿಯ ಅಂದಾಜಿನಿಂದ; ಕೇವಲ ಊಹಾತ್ಮಕವಾಗಿ; ಸರಿಯಾದ ಲೆಕ್ಕಾಚಾರ ಇಲ್ಲದೆ: some of these surveys were done completely by guess and by God(frey) ಈ ಮೋಜಣಿಗಳಲ್ಲಿ ಕೆಲವನ್ನು ಬರಿಯ ಅಂದಾಜಿನಿಂದ ಮಾಡಲಾಯಿತು.
  5. have another guess coming ಎಣಿಕೆ ತಪ್ಪಾಗಿರು; ಊಹೆ ತಪ್ಪಾಗಿರು; ತಿಳಿದುಕೊಂಡದ್ದು ತಪ್ಪಾಗಿರು.
  6. miss one’s guess (ಅಮೆರಿಕನ್‍ ಪ್ರಯೋಗ) ತಪ್ಪು ಎಣಿಕೆ ಮಾಡು; ತಪ್ಪು ಲೆಕ್ಕಾಚಾರ ಮಾಡು.
  7. my guess is ನನಗೆ ಇದು ಹೆಚ್ಚು ಕಡಿಮೆ ಖಚಿತವೆನಿಸುತ್ತದೆ, ಖಂಡಿತವೆನಿಸುತ್ತದೆ.