See also 2gudgeon
1gudgeon ಗಜನ್‍
ನಾಮವಾಚಕ
  1. ಗಜನ್ನು; ಗಾಳಕ್ಕೆ ಬಳಸುವ ಒಂದು ಬಗೆಯ ಸಣ್ಣ ಸಿಹಿನೀರು ಈನು.
  2. ಅತಿ ಮುಗ್ಧ; ಅತಿ ನಂಬಿಕೆಯವನು; ಸುಲಭವಾಗಿ ಮೋಸ ಹೋಗುವವನು.
See also 1gudgeon
2gudgeon ಗಜನ್‍
ನಾಮವಾಚಕ
  1. (ಚಾಲಕ ದಂಡ, ಅಚ್ಚು, ಮೊದಲಾದವುಗಳ ತುದಿಯಲ್ಲಿ ಚಕ್ರ ಮೊದಲಾದವನ್ನು ತಗುಲಿಸಲು ಅಳವಡಿಸಿರುವ) ತಿರುಗಾಣಿ; ತಿರುಗಣಿ ಗೂಟ.
  2. ತಿರುಗಣಿ ಕಣ್ಣು, ಬಳೆ; ಬಾಗಿಲನ್ನು ಕಂಬದ ತಿರುಗಾಣಿಗೆ ಬಂಧಿಸುವ ಬಾಗಿಲಿನ ಕಣ್ಣು, ಬಳೆ.
  3. ನಾವೆಯ ಚುಕ್ಕಾಣಿ ತಿರುಗುವ ಪುಟ, ಒರಳು.
  4. ಕೂಡುಮೊಳೆ; ಸಂಯೋಜಕ ಮೊಳೆ; ಎರಡು ಕಲ್ಲು ದಿಮ್ಮಿಗಳು ಮೊದಲಾದವನ್ನು ಸೇರಿಸುವ ಮೊಳೆ.