guardian ಗಾರ್ಡಿಅನ್‍
ನಾಮವಾಚಕ
  1. ಕಾಯುವವನು; ಕಾಪಿನವನು.
  2. ರಕ್ಷಕ.
  3. ಪಾಲಕ; ಪೋಷಕ.
  4. (ಬ್ರಿಟಿಷ್‍ ಪ್ರಯೋಗ) ಗಾರ್ಡಿಯನ್‍; ದೀನರಕ್ಷಕ; ಚರ್ಚಿನ ಅಧಿಕಾರ ಪ್ರದೇಶ(ಪ್ಯಾರಿಷ್‍)ದಲ್ಲಿ ಯಾ ಒಂದು ಪ್ರಾಂತದಲ್ಲಿ ಬಡವರ ಹಿತಕ್ಕಾಗಿ ಇರುವ ಕಾಯಿದೆಗಳನ್ನು ಕಾರ್ಯಗತಮಾಡಲು ಚುನಾಯಿತವಾದ ಮಂಡಲಿಯ ಸದಸ್ಯ.
  5. (Guardian) ಗಾರ್ಡಿಯನ್‍; ಒಂದು ವಾರ್ತಾಪತ್ರಿಕೆಯ ಹೆಸರು.
  6. (ನ್ಯಾಯಶಾಸ್ತ್ರ) ಪಾಲಕ; ರಕ್ಷಕ; ತನ್ನ ವಹಿವಾಟುಗಳನ್ನು ನಡೆಸಿಕೊಳ್ಳಲು ಅಶಕ್ತನಾಗಿರುವ ಅಪ್ರಾಪ್ತವಯಸ್ಕನ ಯಾ ಹುಟ್ಟಾ ಮೊದ್ದನಾಗಿರುವವನ ರಕ್ಷಣೆಯ, ಯಾ ಅವನ ಆಸ್ತಿಯ ರಕ್ಷಣೆಯ ಯಾ ಇವೆರಡರ ಜವಾಬ್ದಾರಿ ಉಳ್ಳವನು.
  7. ಹ್ರಾನ್ಸಿಸ್ಕನ್‍ ಕಾನ್ವೆಂಟಿನ – ಹಿರಿಯ, ಅಧಿಪತಿ.