guardant ಗಾರ್ಡಂಟ್‍
ಗುಣವಾಚಕ
  1. (ಪ್ರಾಚೀನ ಪ್ರಯೋಗ) ರಕ್ಷಿಸುವ; ಕಾಪಿಡುವ; ರಕ್ಷಕ; ರಕ್ಷಣೆಮಾಡುವ; ಜೋಪಾನವಾಗಿ ನೋಡಿಕೊಳ್ಳುವ: guardant sword ಕಾಪುಕತ್ತಿ; ರಕ್ಷಾಖಡ್ಗ.
  2. (ಮೃಗದ ವಿಷಯದಲ್ಲಿ) ಪ್ರೇಕ್ಷಕಾಭಿಮುಖ; ನೋಡುವವನ ಕಡೆ ಪೂರ್ತಿ ಮುಖ ತಿರುಗಿಸಿದ.
  3. (ವಂಶಲಾಂಛನ ವಿದ್ಯೆ) ಪ್ರೇಕ್ಷಕಾಭಿಮುಖ; ದೇಹವನ್ನು ಪಕ್ಕಕ್ಕೂ ಮುಖವನ್ನು ಸಂಪೂರ್ಣವಾಗಿ ನೋಟಕನತ್ತ ತಿರುಗಿಸಿದಂತೆಯೂ ಕೆತ್ತಿದ, ಚಿತ್ರಿಸಿದ, ಬರೆದ: a lion guardant ಪ್ರೇಕ್ಷಕಾಭಿಮುಖ ಸಿಂಹ; ನೋಟಕನ ಕಡೆ ಪೂರ್ತಿ ಮುಖ ತಿರುಗಿಸಿದ ಭಂಗಿಯಲ್ಲಿ ಚಿತ್ರಿಸಿದ, ಕೆತ್ತಿದ – ಸಿಂಹಾಕೃತಿ.