See also 2grub-stake
1grub-stake ಗ್ರಬ್‍ಸ್ಟೇಕ್‍
ಸಕರ್ಮಕ ಕ್ರಿಯಾಪದ

(ಅಮೆರಿಕನ್‍ ಪ್ರಯೋಗ, ಅಶಿಷ್ಟ) ಅನ್ನಬಟ್ಟೆ ಒದಗಿಸು; (ಹಿಂದೆ ಖನಿಜಶೋಧಕನಿಗೆ ಒದಗಿಸುತ್ತಿದ್ದಂತೆ ಒಬ್ಬನಿಗೆ ಸಿಗುವ ಲಾಭದಲ್ಲಿ ಪಾಲನ್ನು ನೀಡುವುದಕ್ಕೆ ಪ್ರತಿಫಲವಾಗಿ ಯಾ ಅದರಲ್ಲಿ ಇಂತಿಷ್ಟು ಪಾಲು ಕೊಡಬೇಕೆಂಬ ಒಪ್ಪಂದದ ಮೇರೆಗೆ ಅವನಿಗೆ) ದವಸಧಾನ್ಯ, ಬಟ್ಟೆಬರೆ, ಮೊದಲಾದವನ್ನು ನೀಡು.

See also 1grub-stake
2grub-stake ಗ್ರಬ್‍ಸ್ಟೇಕ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಅನ್ನಬಟ್ಟೆ; ಹಿಂದೆ ಖನಿಜಶೋಧಕನಿಗೆ ಮಾಡುತ್ತಿದ್ದಂತೆ ಒಬ್ಬನಿಗೆ ಸಿಕ್ಕುವ ಲಾಭದಲ್ಲಿ ಪಾಲನ್ನು ನೀಡುವುದಕ್ಕೆ ಪ್ರತಿಫಲವಾಗಿ ಯಾ ಅದರಲ್ಲಿ ಇಂತಿಷ್ಟು ಪಾಲು ಕೊಡಬೇಕೆಂಬ ಒಪ್ಪಂದದ ಮೇರೆಗೆ ಒದಗಿಸುವ ದವಸಧಾನ್ಯ, ಬಟ್ಟೆಬರೆ, ಮೊದಲಾದವು.