growler ಗ್ರೌಲರ್‍
ನಾಮವಾಚಕ
  1. ಗುರುಗುಟ್ಟುಗ; ಗುರುಗುಟ್ಟುವ, ಗುರ್ರೆನ್ನುವ – ಪ್ರಾಣಿ, ವ್ಯಕ್ತಿ, ಮೊದಲಾದವು.
  2. (ಬ್ರಿಟಿಷ್‍ ಪ್ರಯೋಗ) (ಚರಿತ್ರೆ) (ನಾಲ್ಕು ಚಕ್ರದ) ಬಾಡಿಗೆ ಸವಾರಿ ಬಂಡಿ.
  3. ಕೆಲವು ಈನು ಜಾತಿಗಳು.
  4. ಚಿಕ್ಕ ಹಿಮಗುಡ್ಡ; ನೀರಿನಲ್ಲಿ ತೇಲುವ ಸಣ್ಣ ನೀರ್ಗಲ್ಲ ಗುಡ್ಡ.
  5. (ಬಿಯರು ಮೊದಲಾದವನ್ನು ತುಂಬುವ) ಸೀಸೆ; ಹೂಜಿ; ಕೂಜ.
  6. (ಭೌತವಿಜ್ಞಾನ) ಗ್ರೌಲರು; ಮೊಟಕು ಮಂಡಲ(short circuit)ವಾಗಿರುವ ತಂತಿ ಸುರುಳಿಗಳನ್ನು ಪತ್ತೆಹಚ್ಚುವ ಒಂದು ಸಾಧನ.