grow ಗ್ರೋ
ಕ್ರಿಯಾಪದ

(ಭೂತರೂಪ grew ಉಚ್ಚಾರಣೆ ಗ್ರೂ; ಭೂತಕೃದಂತ grown, have ಯಾ be ಜೊತೆಯಲ್ಲಿ).

ಸಕರ್ಮಕ ಕ್ರಿಯಾಪದ
  1. (ಕರ್ಮಣಿಪ್ರಯೋಗ) (ಯಾವುದಾದರೂ ಪೈರು, ಬೆಳೆ, ಮೊದಲಾದವುಗಳಿಂದ) ತುಂಬಿರು; ಮುಚ್ಚಿರು; ಆವರಿಸಿರು: the field was grown up with corn ಹೊಲ ಧಾನ್ಯದ ಪೈರಿನಿಂದ ತುಂಬಿತ್ತು.
  2. (ಗಿಡಗಳು, ಹಣ್ಣು, ಉಣ್ಣೆ, ಮೊದಲಾದವನ್ನು ವ್ಯವಸಾಯದಿಂದ, ಕೃಷಿಯಿಂದ) ಬೆಳೆಸು; ಉತ್ಪತ್ತಿಮಾಡು.
  3. (ಗಡ್ಡ ಮೊದಲಾದವನ್ನು) ಬೆಳೆಸು.
ಅಕರ್ಮಕ ಕ್ರಿಯಾಪದ
  1. (ಸಜೀವ ಸಸ್ಯದಂತೆ) ಬೆಳೆ; ಅಭಿವೃದ್ಧಿಯಾಗು.
  2. (ಸಸ್ಯದ ವಿಷಯದಲ್ಲಿ) ಬದುಕಿರು; ಜೀವಿಸಿರು; ಜೀವ ತಳೆದಿರು.
  3. (ಹಾಸ್ಯ ಪ್ರಯೋಗ) (ನಿರ್ಜೀವ ವಸ್ತು ಮೊದಲಾದವುಗಳ ವಿಷಯದಲ್ಲಿ) (ಒಂದು ಸ್ಥಳದಲ್ಲಿ) ಇರು; ದೊರೆ; ಸಿಕ್ಕು.
  4. ಮೊಳೆ; ಕೊನರು; ಮೊಳಕೆಯಿಡು; ಮೊಳಕೆಯೇಳು.
  5. ಮೊಳೆ; ಮೇಲಕ್ಕೇಳು; ಉದ್ಭವಿಸು; ಉತ್ಪನ್ನವಾಗು.
  6. ಸ್ವಾಭಾವಿಕವಾಗಿ – ಹುಟ್ಟು, ಜನಿಸು.
  7. ತಲೆಯೆತ್ತು; ಉದಯಿಸು.
  8. (ಗಾತ್ರದಲ್ಲಿ, ಎತ್ತರದಲ್ಲಿ) ಬೆಳೆ; ದೊಡ್ಡದಾಗು.
  9. (ಮೊತ್ತ, ದರ್ಜೆ, ಶಕ್ತಿ, ಅಧಿಕಾರಗಳಲ್ಲಿ) ಹೆಚ್ಚಾಗು; ಬೆಳೆ; ಅಧಿಕವಾಗು; ವರ್ಧಿಸು.
  10. ಕ್ರಮೇಣ ಆಗು; ಕ್ರಮಕ್ರಮವಾಗಿ – ಬೆಳೆ, ಅಭಿವೃದ್ಧಿಯಾಗು: grow rich ಕ್ರಮೇಣ ಧನಿಕನಾಗು.
  11. (ನೆಲದಲ್ಲಿ, ಮಣ್ಣಿನಲ್ಲಿ) ಹುಟ್ಟು; ಮೊಳೆ; ಸಂಪೂರ್ಣವಾಗಿ ಬೆಳೆ, ಆಕಾರಪಡೆ, ಅಭಿವೃದ್ದಿಗೆ ಬರು: mosquitoes grow in swamps ಸೊಳ್ಳೆಗಳು ಜೌಗುಪ್ರದೇಶದಲ್ಲಿ ಹುಟ್ಟುತ್ತವೆ.
  12. (ಪದ್ಧತಿ, ಸಂಪ್ರದಾಯ, ಮೊದಲಾದವುಗಳ ವಿಷಯದಲ್ಲಿ) ತಲೆದೋರು; ತಲೆಯೆತ್ತು; ವಾಡಿಕೆಗೆ, ರೂಢಿಗೆ – ಬರು: a wicked practice had grown up ಒಂದು ದುಷ್ಟ ಪದ್ಧತಿ ರೂಢಿಗೆ ಬಂದಿತ್ತು. a troublesome situation had grown up ಒಂದು ತೊಂದರೆಯ ಪರಿಸ್ಥಿತಿ ತಲೆದೋರಿತ್ತು.
ಪದಗುಚ್ಛ
  1. growing pains
    1. ಬೆಳವಣಿಗೆ ನೋವು; ಬೆಳೆಯುವ ಕಾಲದಲ್ಲಿ ಚಿಕ್ಕವರಿಗೆ ಸಾಮಾನ್ಯವಾಗಿ (ಕಾಲಿನಲ್ಲಿ) ಕಾಣಿಸಕೊಳ್ಳುವ ನರಗಳ ನೋವು.
    2. (ರೂಪಕವಾಗಿ) ಬಾಲಾರಿಷ್ಟ; ಬಾಲಗ್ರಹ; ಉದ್ಯಮ ಮೊದಲಾದವುಗಳ ಬೆಳವಣಿಗೆಯಲ್ಲಿ ಮೊದಲು ಮೊದಲಿಗೆ ಕಾಣಿಸಿಕೊಳ್ಳುವ ಕಷ್ಟನಷ್ಟಗಳು.
  2. growing season ಬೆಳವಣಿಗೆ ಕಾಲ; ವರ್ಧನಕಾಲ; ಬೆಳೆಯುವ ಕಾಲ; ಮಳೆ ಮತ್ತು ತಾಪಗಳು ಗಿಡಮರಗಳು ಬೆಳೆಯಲು ಅನುವು ಮಾಡಿಕೊಡುವ ಕಾಲ.
  3. grow into one, together, etc. ಒಂದಾಗಿ ಬೆಳೆ; ಒಟ್ಟಾಗಿ, ಒಂದಾಗಿ – ಕೂಡಿಕೊ.
  4. grow out of
    1. ಬಟ್ಟೆ, ಪಾದರಕ್ಷೆ, ಮೊದಲಾದವುಗಳನ್ನು ಈರಿ ಬೆಳೆ; (ಬಟ್ಟೆ, ಪಾದರಕ್ಷೆ, ಮೊದಲಾದವುಗಳ ವಿಷಯದಲ್ಲಿ) ಹಾಕಿಕೊಳ್ಳುವವನಿಗೆ ಚಿಕ್ಕದಾಗು.
    2. ಯಾವುದರದೇ ಪರಿಣಾಮವಾಗಿರು; ಫಲವಾಗಿರು.
    3. ದೊಡ್ಡವನಾಗು; ಬೆಳೆ; ಪ್ರೌಢನಾಗು; ಹುಡುಗಾಟ ಮೊದಲಾದವುಗಳನ್ನು ಉಳಿಸಿಕೊಳ್ಳುವ ವಯಸ್ಸು ದಾಟು, ಈರು.
  5. grow up
    1. ದೊಡ್ಡವನಾಗು; ಪ್ರೌಢನಾಗು; ವಯಸ್ಕನಾಗು.
    2. (ಮುಖ್ಯವಾಗಿ ವಿಧಿರೂಪದಲ್ಲಿ) ವಿವೇಕದಿಂದ ವರ್ತಿಸು.
    3. (ಪದ್ಧತಿ, ಸಂಪ್ರದಾಯ) ಹುಟ್ಟು; ಬೆಳೆ; ಪ್ರಚಲಿತವಾಗು; ರೂಢಿಗೆ ಬರು.
ನುಡಿಗಟ್ಟು
  1. grow downwards
    1. ಇಳಿ; ಕೆಳಗಡೆಗೆ ಹೋಗು.
    2. ಇಳಿ; ಇಳಿದುಹೋಗು; ಕಡಿಮೆಯಾಗು; ಅವನತಿ ಹೊಂದು.
  2. grows on (or upon)
    1. (ಒಬ್ಬನ ಮೇಲೆ) ಹೆಚ್ಚು ಹೆಚ್ಚು ಪ್ರಭಾವ ಬೀರುವಂತಾಗು, ಹಿಡಿತ ಸಾಧಿಸು, ಸ್ವಾಮ್ಯ ಪಡೆದುಕೊ: a bad habit grows on a man ಯಾವುದಾದರೂ ದುರಭ್ಯಾಸ ಒಬ್ಬನ ಮೇಲೆ ಬಹಳ ಪ್ರಭಾವ ಬೀರುವಂತಾಗುತ್ತದೆ.
    2. ಆಕರ್ಷಿಸು; ಮೆಚ್ಚುಗೆಯಾಗು; ಆಸಕ್ತಿ – ಕೆರಳಿಸು, ಸೆಳೆ; (ಮನಸ್ಸನ್ನು) ಸೆರೆಹಿಡಿ; ಪ್ರೀತಿ, ವಿಶ್ವಾಸ, ಮೊದಲಾದವನ್ನು ಗಳಿಸು: music grows and grows on the more we listen ನಾವು ಸಂಗೀತವನ್ನು ಕೇಳಿದಷ್ಟೂ ಅದು ನಮ್ಮ ಆಸಕ್ತಿಯನ್ನು ಸೆಳೆಯುತ್ತದೆ. the picture grows on me ಆ ಚಿತ್ರ ನನ್ನ ಮನಸ್ಸನ್ನು ಸೆರೆ ಹಿಡಿಯುತ್ತದೆ.