See also 2group
1group ಗ್ರೂಪ್‍
ನಾಮವಾಚಕ
  1. ಗುಂಪು; ಸಮೂಹ; ನೆರವಿ; ಪುಂಜ; ತಂಡ; ಸಮುದಾಯ; ಒಟ್ಟಿಗೆ ಇರುವ ಮನುಷ್ಯರು ಯಾ ವಸ್ತುಗಳು.
  2. ಪಂಗಡ; ಗುಂಪು; ಸಮುದಾಯ; ಒಂದು ತರಗತಿಗೆ ಸೇರಿದ ಯಾ ಸೇರಿಸಿದ ವ್ಯಕ್ತಿಗಳು ಯಾ ವಸ್ತುಗಳು.
  3. ಗುಂಪು; ಒಂದೇ ಒಡೆತನದಲ್ಲಿರುವ ವಾಣಿಜ್ಯ ಕಂಪನಿಗಳು.
  4. (ರಾಜಕೀಯದಲ್ಲಿ ದ್ವಿಪಕ್ಷ ಪ್ರಭುತ್ವ ಇಲ್ಲದಿರುವ ಶಾಸನಸಭೆಗಳಲ್ಲಿ, ಪಕ್ಷಕ್ಕಿಂತ ಚಿಕ್ಕದಾದ) ಒಳಪಂಗಡ; ಒಳಗುಂಪು.
  5. ಸಮುದಾಯ ಚಿತ್ರ; ರಾಶಿಚಿತ್ರ; ಎರಡು ಯಾ ಹೆಚ್ಚಿನ ಚಿತ್ರಗಳು, ವಸ್ತುಗಳು ಬೇರೆ ಬೇರೆಯಾಗಿದ್ದರೂ ಪರಸ್ಪರ ಹೊಂದಿಕೊಂಡು ಆಗಿರುವ ಸಮಗ್ರ ರಚನೆ, ವಿನ್ಯಾಸ.
  6. ವಾಯುಪಡೆಯ ಯಾ ವಿಮಾನತಂಡದ – ಒಂದು ಭಾಗ, ವಿಭಾಗ.
  7. ಜನಪ್ರಿಯ ಸಂಗೀತ(ಗಾರರ) ತಂಡ.
See also 1group
2group ಗ್ರೂಪ್‍
ಸಕರ್ಮಕ ಕ್ರಿಯಾಪದ
  1. ಗುಂಪು ಸೇರಿಸು; ಗುಂಪಾಗಿಸು; ಗುಂಪುಗೂಡಿಸು; ಸಮೂಹಿಸು; ಸಮೂಹಗೊಳಿಸು.
  2. ಸಮೂಹಿಸು; ಗುಂಪಿನೊಡನೆ, ಗುಂಪಿನಲ್ಲಿ – ಸೇರಿಸು.
  3. (ಚಿತ್ರಗಳು, ಬಣ್ಣಗಳು, ಮೊದಲಾದವನ್ನು) ಸುವ್ಯವಸ್ಥಿತವಾಗಿ, ಹೊಂದಿಕೆಯಾದ ಸಮಷ್ಟಿರೂಪ ಬರುವಂತೆ ಅಳವಡಿಸು, (ಅವುಗಳಿಗೆ) ಸಮನ್ವಿತ ರೂಪ ಕೊಡು.
  4. ವರ್ಗೀಕರಿಸು.
ಅಕರ್ಮಕ ಕ್ರಿಯಾಪದ

(ವಿರಳ ಪ್ರಯೋಗ) ಗುಂಪಿನಲ್ಲಿ ಸೇರು; ಗುಂಪು ಸೇರು; ಗುಂಪಾಗು; ಗುಂಪುಗೂಡು.