See also 2gross  3gross
1gross ಗ್ರೋಸ್‍
ನಾಮವಾಚಕ

(ಬಹುವಚನ ಅದೇ). ಗ್ರೋಸು; 12 ಡಜನ್ನು.

ನುಡಿಗಟ್ಟು

by the gross ಗ್ರೋಸುಗಟ್ಟಲೆ; ಸಾರಾಸಗಟಾಗಿ; ಭಾರಿ ಪ್ರಮಾಣದಲ್ಲಿ.

See also 1gross  3gross
2gross ಗ್ರೋಸ್‍
ಗುಣವಾಚಕ
  1. ಹುಲುಸಾಗಿ, ಗಾದಾಗಿ, ತುರುಗಾಗಿ – ಬೆಳೆದ; ಸಮೃದ್ಧವಾದ: gross shoots ಹುಲುಸಾದ ಕುಡಿಗಳು.
  2. ಮಿತಿಈರಿ ತಿಂದು ಊದಿದ; ಗುಡಾಣ, ಡೊಳ್ಳು – ಹೊಟ್ಟೆಯ; ಬೊಜ್ಜು ಬೊಜ್ಜಾದ; ಅಸಹ್ಯವಾಗಿ ಬೊಜ್ಜು ಬೆಳೆದ.
  3. ಎದ್ದು ಕಾಣುವ; ಅತಿ ಸ್ಪಷ್ಟವಾದ; ವಿಸ್ಪಷ್ಟವಾದ; ಕಣ್ಣು ಕುಕ್ಕುವಂಥ: one gross error after another ಒಂದಾದ ಮೇಲೊಂದು ಕಣ್ಣಿಗೆ ಕುಕ್ಕುವಂಥ ತಪ್ಪುಗಳು.
  4. ಒಟ್ಟಿನ; ಪೂರಾ; ಕಳೆತಗಳು ಸೇರಿರದ; ನಿವ್ವಳವಲ್ಲದ: gross earnings ಒಟ್ಟು ಆದಾಯ.
  5. ದಟ್ಟ; ಸಾಂದ್ರ; ನಿಬಿಡ; ಘನ: a gross fog ದಟ್ಟವಾದ ಮಂಜು, ಕಾವಳ.
  6. ಪಾರ್ಥಿವ; ಪ್ರಾಕೃತ; ಸ್ಥೂಲ; ಇಂದ್ರಿಯಗೋಚರ; ಐಂದ್ರಿಯಕ; (ಕೇವಲ) ಐಹಿಕ; ಪ್ರಾಪಂಚಿಕ: spirits of purest light at first, now grown gross by sinning ಮೊದಲು ಪರಿಶುದ್ಧ ತೇಜಸ್ಸಿನಿಂದ ತುಂಬಿದ್ದ ಆತ್ಮಗಳು ಈಗ ಪಾಪದ ಫಲವಾಗಿ ಕೇವಲ ಪಾರ್ಥಿವವಾಗಿವೆ.
  7. (ಆಹಾರ ಮೊದಲಾದವು) ಕೀಳ್ತೆರದ; ಒರಟಾದ; ಕೊಳಕಾದ; ಅಸಹ್ಯಕರ; ಓಕರಿಕೆ ಹುಟ್ಟಿಸುವ: fish, oil and such gross commodities ಈನು, ಎಣ್ಣೆ, ಮೊದಲಾದ ಕೊಳಕು ಪದಾರ್ಥಗಳು.
  8. (ಇಂದ್ರಿಯ ಮೊದಲಾದ) ಸೂಕ್ಷ್ಮವಲ್ಲದ; ಜಡ; ಮಂದ: our eyes are too gross to discern the workmanship of nature ನಮ್ಮ ಕಣ್ಣುಗಳು ಪ್ರಕೃತಿಯ ಕಲಾವಂತಿಕೆಯನ್ನು ಗ್ರಹಿಸಲಾಗದಷ್ಟು ಮಂದವಾಗಿವೆ.
  9. (ರೀತಿ ನೀತಿಗಳಲ್ಲಿ) ನಯನಾಜೂಕಿಲ್ಲದ; ಒರಟಾದ; ಅಸಂಸ್ಕೃತ; ಅಶ್ಲೀಲ; ಅಸಭ್ಯ; ನೀತಿಗೆಟ್ಟ: society of high culture, but in morals lax, even gross ಅತಿಯಾದ ನಯನಾಜೂಕಿನ ಸಮಾಜ, ಆದರೆ ಅದು ನೀತಿಯಲ್ಲಿ ಸಡಿಲ, ಅಷ್ಟೇ ಅಲ್ಲ, ಅಸಭ್ಯ.
ಪದಗುಚ್ಛ
  1. gross feeder
    1. ಕದನ್ನಭಕ್ಷಕ; ರೂಕ್ಷಾಹಾರಿ; ಕೊಳಕು ಆಹಾರ ತಿನ್ನುವವನು.
    2. ವಿಪರೀತದಿನಿ; ಹೇರಳವಾಗಿ ಗೊಬ್ಬರವನ್ನು ಬಯಸುವ ಗಿಡ ಮೊದಲಾದವು.
  2. in (the) gross (ವಿವರಗಳಿಗೆ ಹೋಗದೆ) ಸ್ಥೂಲವಾಗಿ; ಒಟ್ಟಿನ ಮೇಲೆ; ಒಟ್ಟಾರೆ.
See also 1gross  2gross
3gross ಗ್ರೋಸ್‍
ಸಕರ್ಮಕ ಕ್ರಿಯಾಪದ

ಒಟ್ಟು ಲಾಭವಾಗಿ ಉತ್ಪಾದಿಸು ಯಾ ಗಳಿಸು.

ಪದಗುಚ್ಛ

gross up ಒಟ್ಟು ಮೊತ್ತಕ್ಕೇರಿಸು; ತೆರಿಗೆ ಮೊದಲಾದವುಗಳನ್ನು ಕಳೆಯುವುದಕ್ಕಿಂತ ಮೊದಲಿನ ಮೊತ್ತಕ್ಕೆ (ನಿವ್ವಳ ಮೊತ್ತವನ್ನು) ಏರಿಸು, ಹೆಚ್ಚಿಸು.