See also 2groove
1groove ಗ್ರೂವ್‍
ನಾಮವಾಚಕ
  1. (ಮುಖ್ಯವಾಗಿ ಮುಂದಕ್ಕೆ ಚಲಿಸುವಂತೆ ಮಾಡಲು ಯಾ ಅದೇ ಆಕಾರದ ಉಬ್ಬು ಅದಕ್ಕೆ ಹೊಂದುವಂತಾಗಲು ಮರ, ಲೋಹ, ಮೊದಲಾದವುಗಳಲ್ಲಿ ಕೊರೆದ, ಮಾಡಿದ) ತೋಡು; ಗಾಡಿ.
  2. (ರೂಢಿಯ) ಜಾಡು; ಅಭ್ಯಾಸದ ನಡವಳಿಕೆ; ರೂಢಿಬಿದ್ದ ಕೆಲಸಕಾರ್ಯ; ನಿತ್ಯ ವಿಧಾನ; ನಿತ್ಯಗಟ್ಟಲೆ; ಸಂಪ್ರದಾಯ; ವೃದ್ಧಾಚಾರ.
  3. ಕೊರಕಲು; ಸವಕಲು ದಾರಿ.
  4. (ಒಬ್ಬನ ಸ್ವಭಾವ, ಸಾಮರ್ಥ್ಯ, ಮನೋಧರ್ಮ, ಮೊದಲಾದವುಗಳಿಗೆ ತಕ್ಕ) ಸ್ಥಾನ, ಹುದ್ದೆ, ಮೊದಲಾದವು: found his groom in advertising ಜಾಹೀರಾತು ಕೆಲಸ ಸಿಕ್ಕಿದ್ದರಿಂದ ಅವನಿಗೆ ತನ್ನ ಸಾಮರ್ಥ್ಯಕ್ಕೆ ತಕ್ಕ ಹುದ್ದೆ ದೊರೆತಂತಾಯಿತು.
  5. (ಅಶಿಷ್ಟ) ಅತ್ಯುತ್ತಮ – ಸ್ಥಿತಿ, ದೆಶೆ, ಮನೋಧರ್ಮ; ಹಿತವಾದ, ಸರಿಯಾದ – ಸ್ಥಿತಿ: a hot bath and a drink will put you back in the groove ಬಿಸಿನೀರು ಸ್ನಾನ, ಒಂದಿಷ್ಟು ಪಾನ – ಇವು ನಿನ್ನನ್ನು ಹಿತವಾದ ಸ್ಥಿತಿಗೆ ಒಯ್ಯುತ್ತವೆ.
  6. (ಅಶಿಷ್ಟ) ಒಳ್ಳೆಯ ಜಾಸ್‍ ಸಂಗೀತ.
ನುಡಿಗಟ್ಟು

in the groove (ಅಶಿಷ್ಟ)

  1. ತುಂಬ ಚೆನ್ನಾಗಿ ಪ್ರದರ್ಶನ ನೀಡುತ್ತಿರುವ.
  2. ಒಳ್ಳೆಯ ಪ್ರದರ್ಶನವನ್ನು ಮೆಚ್ಚುವ ಯಾ ಮೆಚ್ಚುವ ಮನೋಧರ್ಮವುಳ್ಳ.
  3. ಪರಮಾಯಿಷಿಯಾದ; ಸೊಗಸಾದ; ಭರ್ಜರಿಯಾದ.
  4. ಉಲ್ಲಾಸಪೂರ್ಣ; ಉತ್ಸಾಹಭರಿತ.
  5. ಸದ್ಯದ ಜನಪ್ರಿಯ ಹ್ಯಾಷನ್ನಾಗಿರುವ; ಅತ್ಯಾಧುನಿಕ; ನವೋನವ.
See also 1groove
2groove ಗ್ರೂವ್‍
ಸಕರ್ಮಕ ಕ್ರಿಯಾಪದ
  1. (ಯಾವುದರಲ್ಲೇ) ಗಾಡಿ, ತೋಡು, ಮೊದಲಾದವನ್ನು – ಕೊರೆ, ಮಾಡು.
  2. ಗಾಡಿ, ತೋಡು, ಮೊದಲಾದವನ್ನು ಮಾಡಿ (ಯಾವುದಕ್ಕೇ) ಸೇರಿಸು, ಕೂರಿಸು.
  3. (ಅಶಿಷ್ಟ) (ವ್ಯಕ್ತಿಗೆ) ಖುಷಿಕೊಡು; ಆನಂದ ಉಂಟುಮಾಡು.
ಅಕರ್ಮಕ ಕ್ರಿಯಾಪದ

(ಅಶಿಷ್ಟ)

  1. ಸೊಗಸಾಗಿರು.
  2. ಒಳ್ಳೆಯ ಜಾಸ್‍ ಸಂಗೀತದ ಸುಖ ಅನುಭವಿಸು.
  3. ಮುಂದುವರಿ; ಪ್ರಗತಿ ಪಡೆ; ಅಭಿವೃದ್ಧಿಹೊಂದು.
  4. (ಒಬ್ಬ ವ್ಯಕ್ತಿಯೊಡನೆ) ಚೆನ್ನಾಗಿ ಹೊಂದಿಕೊಂಡು ಹೋಗು.