See also 2groom
1groom ಗ್ರೂಮ್‍
ನಾಮವಾಚಕ
  1. (ಬ್ರಿಟಿಷ್‍ ಪ್ರಯೋಗ) (ಇಂಗ್ಲೆಂಡಿನಲ್ಲಿ) ಅರಮನೆಯ ಆಡಳಿತದ ಒಬ್ಬ ಅಧಿಕಾರಿ.
  2. ಕಾಸದಾರ; ಕುದುರೆಯ ಆಳು; ಸಾಹಣಿ; ಅಶ್ವಪಾಲ; ಕುದುರೆಗಳನ್ನು ನೋಡಿಕೊಳ್ಳುವವನು.
  3. ಮದುವಣಿಗ; ಮದುಮಗ.
  4. (ಪ್ರಾಚೀನ ಪ್ರಯೋಗ) ಸೇವಕ; ಗಂಡಾಳು.
ಪದಗುಚ್ಛ
  1. Groom in waiting (ಬ್ರಿಟಿಷ್‍ ಪ್ರಯೋಗ) (ರಾಜನ ಪರಿಜನರಲ್ಲಿ) ಒಬ್ಬ ಅಧಿಕಾರಿ.
  2. Groom of the stole (ಬ್ರಿಟಿಷ್‍ ಪ್ರಯೋಗ) ಇಂಗ್ಲೆಂಡಿನ ಅರಮನೆಯಲ್ಲಿ ವಸ್ತ್ರಾಲಂಕಾರ, ಸೆಜ್ಜೆ, ಮೊದಲಾದವನ್ನು ನೋಡಿಕೊಳ್ಳುವ ಅಧಿಕಾರಿ; ಶಯ್ಯಾಧಿಕಾರಿ; ಸೆಜ್ಜೆ ಅಧಿಕಾರಿ.
See also 1groom
2groom ಗ್ರೂಮ್‍
ಸಕರ್ಮಕ ಕ್ರಿಯಾಪದ
  1. (ಕುದುರೆಯನ್ನು) ನೋಡಿಕೊ; ಕುದುರೆಯ ಉಸ್ತುವಾರಿ ವಹಿಸು; ಕುದುರೆಗೆ ಮಾಲೀಸು ಮಾಡು; ದಾಣ ಯಾ ಮೇವು ತಿನ್ನಿಸು.
  2. (ವ್ಯಕ್ತಿ ಮೊದಲಾದವರನ್ನು) ಅಂದಗೊಳಿಸು; ನೀಟು ಮಾಡು; ಚೆನ್ನಾಗಿ, ಲಕ್ಷಣವಾಗಿ ಕಾಣಿಸುವಂತೆ ಸಿಂಗರಿಸು.
  3. (ಒಬ್ಬನನ್ನು ಯಾವುದಾದರೂ ಸ್ಥಾನ ಮೊದಲಾದವಕ್ಕೆ) ತಯಾರುಮಾಡು; ತರಪೇತು ಮಾಡು: was being groomed as a presidential candidate ಅಧ್ಯಕ್ಷ ಸ್ಥಾನಕ್ಕೆ ಒಬ್ಬ ಅಭ್ಯರ್ಥಿಯಾಗಿ ತಯಾರು ಮಾಡಲಾಗಿದ್ದ, ತರಪೇತು ಕೊಡಲಾಗಿದ್ದ.
  4. (ಆತ್ಮಾರ್ಥಕ) ತಯಾರಾಗು; ಸಿದ್ಧವಾಗು: grooming for dinner ಊಟಕ್ಕೆ ಸಿದ್ಧವಾಗುತ್ತ.
ಪದಗುಚ್ಛ

well-groomed (ಮನುಷ್ಯರ ವಿಷಯದಲ್ಲಿ) (ಕೂದಲು, ಗಡ್ಡ, ಮೊದಲಾದವನ್ನು ಬಾಚಿ, ಸುಂದರವಾಗಿ ಉಡಿಗೆ ತೊಡಿಗೆ ಧರಿಸಿ) ನೀಟು ಮಾಡಿಕೊಂಡ; ಅಂದ ಮಾಡಿಕೊಂಡಿರುವ; ಚೆನ್ನಾಗಿ ಸಿಂಗರಿಸಿಕೊಂಡ.