See also 2groan
1groan ಗ್ರೋನ್‍
ಸಕರ್ಮಕ ಕ್ರಿಯಾಪದ

ಮುಲುಕುತ್ತ, ನರಳುತ್ತ, ಕೊರಗುತ್ತ – ಹೇಳು, ಆಡು, ವ್ಯಕ್ತಪಡಿಸು: will groan out some prayer ನರಳುತ್ತಾ (ಏನನ್ನೋ) ಮೊರೆಯಿಡುತ್ತಾನೆ.

ಅಕರ್ಮಕ ಕ್ರಿಯಾಪದ
  1. ಮುಲುಗು; ನರಳು; ವ್ಯಥೆಪಡು; ಸಂಕಟಪಡು; ಕೊರಗು; ಹಲುಬು; (ನೋವು, ದುಃಖ, ಅಸಮ್ಮತಿ, ಮೊದಲಾದವನ್ನು ಸೂಚಿಸುವ) ಆಳವಾದ, ಅಸ್ಪಷ್ಟವಾದ ಧ್ವನಿ ಮಾಡು: groaned with rage and frustration ಕ್ರೋಧ ಹಾಗೂ ಆಶಾಭಂಗದಿಂದ ನರಳಿದ.
  2. ಪೀಡಿತನಾಗಿರು; ಸಂಕಟಪಡು; ಹೊರಲಾರದೆ ನರಳು: groan under injustice ಅನ್ಯಾಯದಿಂದ ಜರ್ಜರಿತನಾಗಿ ನರಳು. shelf groans with books ಬಡು ಪುಸ್ತಕದ ಹೊರೆಯಿಂದ ನರಳುತ್ತಿದೆ; ಬಡುವಿನ ಮೇಲೆ ಹೊರಲಾರದಷ್ಟು ಪುಸ್ತಕಗಳಿವೆ.
  3. (ಪ್ರಾಚೀನ ಪ್ರಯೋಗ) ಯಾವುದಾದರೂ ವಸ್ತುವಿಗಾಗಿ – ಹಂಬಲಿಸು, ಅತ್ಯಾಶೆಯಿಂದ ಅಪೇಕ್ಷಿಸು, ಬಾಯಿಬಾಯಿಬಿಡು, ತಹತಹಿಸು: groaning to be with her again ಪುನಃ ಅವಳೊಂದಿಗೆ ಇರಬೇಕೆಂದು ಹಂಬಲಿಸುತ್ತಾ.
ಪದಗುಚ್ಛ
  1. groan down (ನರಳಾಟದ, ಅತೃಪ್ತಿ ಸೂಚಕವಾದ ಕೂಗುಗಳಿಂದ ಭಾಷಣಕಾರ ಮೊದಲಾದವರನ್ನು) ಬಾಯಿಮುಚ್ಚಿಸು; ಸುಮ್ಮನಾಗಿಸು: the consuls were groaned down ಕಾನ್ಸಲ್‍ರನ್ನು (ನರಳಿಕೆಯ ಕೂಗಿನಿಂದ) ಬಾಯಿ ಮುಚ್ಚಿಸಿದರು.
  2. groaning board ತಿನಿಸುಗಳು ಇಡಿ ಕಿರಿದ ಊಟದ ಮೇಜು.
  3. groan inwardly ಒಳಗೊಳಗೇ – ಕೊರಗು, ವ್ಯಥೆಪಡು.
See also 1groan
2groan ಗ್ರೋನ್‍
ನಾಮವಾಚಕ

ಮುಲುಕು; ನರಳಾಟ; ನರಳಿಕೆ; ಸಂಕಟಧ್ವನಿ; ಕೊರಗಿನ ಕೂಗು.