See also 2grit
1grit ಗ್ರಿಟ್‍
ನಾಮವಾಚಕ
  1. (ಮುಖ್ಯವಾಗಿ ತೊಂದರೆ ಕೊಡುವ ಯಾ ಯಂತ್ರಾದಿಗಳಲ್ಲಿ ಅಡಚಿಕೊಳ್ಳುವ) ಕಲ್ಲಿನ ಯಾ ಮರಳಿನ ಸಣ್ಣ ಕಣಗಳು.
  2. ಒರಟು ಮರಳುಗಲ್ಲು.
  3. ಕಲ್ಲಿನ ಎಳೆ ಯಾ ರಚನೆ.
  4. (ಆಡುಮಾತು) (ಚಾರಿತ್ರ್ಯದ, ಶೀಲದ) ದಾರ್ಢ್ಯ; ಸ್ಥೈರ್ಯ.
  5. ಎದೆಗಾರಿಕೆ; ಕೆಚ್ಚೆದೆ; ದಿಟ್ಟತನ; ಛಾತಿ.
  6. (ಕಷ್ಟ) ಸಹಿಷ್ಣುತೆ; ತಾಳಿಕೆ.
See also 1grit
2grit ಗ್ರಿಟ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ gritted, ವರ್ತಮಾನ ಕೃದಂತ gritting).
ಸಕರ್ಮಕ ಕ್ರಿಯಾಪದ
  1. (ಹಲ್ಲು) ಮಸೆ; ಕಡಿ.
  2. (ಮಂಜುಗಡ್ಡೆಯ ರಸ್ತೆ ಮೊದಲಾದವುಗಳ ಮೇಲೆ) ಕಲ್ಲಿನ, ಮರಳಿನ ಸಣ್ಣ ಕಣಗಳನ್ನು ಹರಡು.
ಅಕರ್ಮಕ ಕ್ರಿಯಾಪದ
  1. ಕರಕರಗುಟ್ಟು; ಕರಕರ ಶಬ್ದ ಮಾಡು.
  2. ಕರಕರಗುಟ್ಟುತ್ತ – ಸಾಗು, ಹೋಗು, ಚಲಿಸು.