See also 2gripe
1gripe ಗ್ರೈಪ್‍
ಸಕರ್ಮಕ ಕ್ರಿಯಾಪದ
  1. ಭದ್ರವಾಗಿ ಹಿಡಿ(ದುಕೊ); ಬಿಗಿ ಹಿಡಿ.
  2. ಹಿಂಸಿಸು; ಉಪದ್ರವ ಕೊಡು; ಪೀಡಿಸು.
  3. (ನೌಕಾಯಾನ) (ದೋಣಿಯನ್ನು ಹಗ್ಗಗಳಿಂದ) ಕಟ್ಟು; ಬಿಗಿ.
  4. ಹೊಟ್ಟೆನುಲಿತ ತರು; ಹೊಟ್ಟೆಶೂಲೆ, ಜಠರಶೂಲೆ – ಉಂಟುಮಾಡು.
ಅಕರ್ಮಕ ಕ್ರಿಯಾಪದ
  1. ಭದ್ರವಾಗಿ ಹಿಡಿ; ಬಿಗಿಹಿಡಿ.
  2. ಹೊಟ್ಟೆ ನುಲಿತವನ್ನು, ಜಠರಶೂಲೆಯನ್ನು – ಅನುಭವಿಸು.
  3. (ಹಡಗು) ಚುಕ್ಕಾಣಿ ತಿರುಗಿಸಿದರೂ ಗಾಳಿಯ ಕಡೆಗೆ ಬರು.
  4. (ಅಶಿಷ್ಟ) ದೂರು; ಗೊಣಗು: people are always griping about kids hanging around the wrong places ಇರಬಾರದ ಸ್ಥಳದಲ್ಲಿ ಸುಳಿದಾಡುವ ಮಕ್ಕಳ ಬಗ್ಗೆ ಜನ ಯಾವಾಗಲೂ ದೂರುತ್ತಿದ್ದಾರೆ.
See also 1gripe
2gripe ಗ್ರೈಪ್‍
ನಾಮವಾಚಕ
  1. ಬಿಗಿ ಹಿಡಿಯುವುದು; ಬಿಗಿಹಿಡಿತ.
  2. (ಪ್ರಾಚೀನ ಪ್ರಯೋಗ) ಹಿಡಿತ; ವಶ; ಸ್ವಾಧೀನ.
  3. (ಬಹುವಚನದಲ್ಲಿ) ಹೊಟ್ಟೆಶೂಲೆ; ಜಠರಶೂಲೆ; ಹೊಟ್ಟೆನುಲಿತ.
  4. (ಆಯುಧ ಮೊದಲಾದವುಗಳ ವಿಷಯದಲ್ಲಿ) ಹಿಡಿ; ಹಿಡಿಕೆ.
  5. (ನೌಕಾಯಾನ) (ಬಹುವಚನದಲ್ಲಿ) (ದೋಣಿಯನ್ನು ಅದರ ಸ್ಥಾನದಲ್ಲಿ) ಬಿಗಿದು ನಿಲ್ಲಿಸುವ ಹಗ್ಗಗಳು.
  6. (ಅಶಿಷ್ಟ) ದೂರು.
ಪದಗುಚ್ಛ

in the gripe of ಹಿಡಿತದಲ್ಲಿ; ಅಧೀನದಲ್ಲಿ.