See also 2grip
1grip ಗ್ರಿಪ್‍
ನಾಮವಾಚಕ
  1. (ಬಿಗಿ) ಹಿಡಿತ; ಭದ್ರವಾಗಿ ಹಿಡಿದಿರುವುದು; ಬಲ್ವಿಡಿ (ಗ್ರಾಮ್ಯಪ್ರಯೋಗ).
  2. ಹಿಡಿಯುವ ಶಕ್ತಿ; ಗ್ರಹಣಶಕ್ತಿ.
  3. ಕೈಕುಲುಕುವ ರೀತಿ.
  4. (ಏನನ್ನಾದರೂ) ಹಿಡಿದುಕೊಳ್ಳುವ ರೀತಿ; ಕೈ ಹಿಡಿತದ ವರಸೆ, ಪಟ್ಟು: overlapping grip ಮುಚ್ಚು ಹಿಡಿತ; (ಗಾಲ್‍ ಆಟದಲ್ಲಿ ಬಲಗೈ ಕಿರುಬೆರಳು ಎಡಗೈ ತೋರುಬೆರಳನ್ನು ಮುಚ್ಚುವಂತೆ ದಾಂಡನ್ನು ಹಿಡಿಯುವುದು).
  5. (ರೂಪಕವಾಗಿ) ಹಿಡಿತ; ಸ್ವಾಧೀನ; ಹತೋಟಿ; ವಶ; ವಜ್ರಮುಷ್ಟಿ: unable to escape the grip of his old habits ಅವನ ಹಳೆಯ ಅಭ್ಯಾಸಗಳ ವಜ್ರಮುಷ್ಟಿಯಿಂದ ತಪ್ಪಿಸಿಕೊಳ್ಳಲಾರದೆ.
  6. (ಬೌದ್ಧಿಕ) ಗ್ರಹಿಕೆ; ಗ್ರಹಣ ಸಾಮರ್ಥ್ಯ, ಶಕ್ತಿ; ವಿಷಯವೊಂದನ್ನು ಅರಿತುಕೊಳ್ಳುವ ಯಾ ಸ್ವಾಧೀನಪಡಿಸಿಕೊಳ್ಳುವ ಶಕ್ತಿ: wanting in intellectual grip ಬೌದ್ಧಿಕ ಗ್ರಹಿಕೆ ಸಾಲದ.
  7. ಆಕರ್ಷಣೆ; ಗಮನವನ್ನು ಸೆಳೆದಿಡುವ ಶಕ್ತಿ.
  8. (ಯಂತ್ರ ಮೊದಲಾದವುಗಳಲ್ಲಿರುವ) ಕಚ್ಚುವ ಭಾಗ.
  9. (ಆಯುಧ ಮೊದಲಾದವುಗಳ) ಹಿಡಿ; ಹಿಡಿಕೆ; ಹಿಡಿಯ ಭಾಗ.
  10. (ಅಮೆರಿಕನ್‍ ಪ್ರಯೋಗ) (ಪ್ರಯಾಣಿಕನ) ಹಿಡಿಚೀಲ; ಕೈಚೀಲ.
  11. = hair-grip.
ಪದಗುಚ್ಛ
  1. get a grip on oneself ತನ್ನ ಮೇಲೆ ಹತೋಟಿ ಇಟ್ಟುಕೊ; ಸಂಯಮ ಸಾಧಿಸು; ಎಚ್ಚರ ವಹಿಸು.
  2. lengthen one’s grip ಬ್ಯಾಟು, ದೊಣ್ಣೆ, ಮೊದಲಾದವನ್ನು ಮೇಲೆ ಹಿಡಿದುಕೊ; ಅವುಗಳ ಹೊಡೆಯುವ ತುದಿಯಿಂದ ದೂರದಲ್ಲಿ ಹಿಡಿದುಕೊ.
  3. lose one’s grip ಬ್ಯಾಟು, ದೊಣ್ಣೆ, ಮೊದಲಾದವನ್ನು ಕೆಳಗೆ ಹಿಡಿದುಕೊ; ಅವುಗಳ ಹೊಡೆಯುವ ತುದಿಗೆ ಹತ್ತಿರದಲ್ಲಿ ಹಿಡಿದುಕೊ.
  4. shorten one’s grip (ಯಾವುದರದೇ ಮೇಲೆ) ಹತೋಟಿ ಕಳೆದುಕೊ.
ನುಡಿಗಟ್ಟು
  1. at grips with
    1. ಮುಖಾಮುಖಿಯಾಗಿ; ಕೈ ಕೈ ಮಿಲಾಯಿಸಿ; ಮಲ್ಲಾಮಲ್ಲಿಯಾಗಿ.
    2. (ವಿಷಯ, ಸಮಸ್ಯೆಯನ್ನು) ನೇರವಾಗಿ ಯಾ ದೃಢವಾಗಿ ಎದುರಿಸಿ.
  2. come (or get) to grips with = ನುಡಿಗಟ್ಟು \((1)\).
See also 1grip
2grip ಗ್ರಿಪ್‍
ಕ್ರಿಯಾಪದ

(ಭೂತರೂಪ ಮತ್ತು ಭೂತಕೃದಂತ gripped, ವರ್ತಮಾನ ಕೃದಂತ gripping).

ಸಕರ್ಮಕ ಕ್ರಿಯಾಪದ
  1. (ಭದ್ರವಾಗಿ, ಬಿಗಿಯಾಗಿ, ಬಲವಾಗಿ) ಹಿಡಿ; ಹಿಡಿದುಕೊ.
  2. (ಕೊಕ್ಕು, ಮೂತಿ, ಹಲ್ಲು, ಮೊದಲಾದವುಗಳಿಂದ) ಕಚ್ಚಿ ಹಿಡಿ.
  3. ಆಕರ್ಷಿಸು; ಗಮನ ಸೆಳೆ; ಮನಸ್ಸನ್ನು ಹಿಡಿದಿಡು: the pathos of the play gripped the beholders ನಾಟಕದ ಕರುಣರಸ ಪ್ರೇಕ್ಷಕರ ಗಮನವನ್ನು ಸೆಳೆದಿಟ್ಟಿತು.
ಅಕರ್ಮಕ ಕ್ರಿಯಾಪದ

ಬಿಗಿಹಿಡಿ; ಕಚ್ಚು: the anchor grips ಲಂಗರು ಕಚ್ಚುತ್ತದೆ, ಹಿಡಿದುಕೊಳ್ಳುತ್ತದೆ.