grinder ಗ್ರೈನ್ಡರ್‍
ನಾಮವಾಚಕ
  1. ದವಡೆಹಲ್ಲು; ಅರೆಯುವ ಹಲ್ಲು.
  2. ಗ್ರೈಂಡರು; ಬೀಸುವ, ಹಿಟ್ಟುಮಾಡುವ, ಸಾಣೆ ಹಿಡಿಯುವ ಯಂತ್ರ.
  3. ಬೀಸುವ ಕಲ್ಲಿನ ಮೇಲಿನ ಹೋಳು.
  4. (ಮುಖ್ಯವಾಗಿ ಸಮಾಸಗಳಲ್ಲಿ) ಬೀಸುವವನು ಯಾ ಸಾಣೆಗಾರ: knife grinder ಚೂರಿ ಸಾಣೆ ಹಿಡಿಯುವವ. organ grinder ಹರ್ಡಿಗುರ್ಡಿ ಮೊದಲಾದ ಆರ್ಗನ್‍ ವಾದ್ಯವನ್ನು ಬೀದಿಯಲ್ಲಿ ಸಂಪಾದನೆಗಾಗಿ ನುಡಿಸುವವ.
  5. ಪರೀಕ್ಷೆಗೆ ತಯಾರಿ ಕೊಡುವವನು; ಉರುಹಚ್ಚಿಸುವವನು; ಉರುಹೊಡೆಸುವವನು; ಬಾಯಿಪಾಠ ಕಲಿಸುವವನು; ಕಂಠಪಾಠ ಮಾಡಿಸುವವನು; ಗಟ್ಟಿ ಮಾಡಿಸುವವನು.
  6. (ಅಮೆರಿಕನ್‍ ಪ್ರಯೋಗ) ಕಷ್ಟಪಟ್ಟು ದುಡಿಯುವ ವಿದ್ಯಾರ್ಥಿ.