See also 2grind
1grind ಗ್ರೈನ್ಡ್‍
ಕ್ರಿಯಾಪದ

(ಭೂತರೂಪ ಮತ್ತು ಭೂತಕೃದಂತ ground).

ಸಕರ್ಮಕ ಕ್ರಿಯಾಪದ
  1. (ಬೀಸುವ ಕಲ್ಲು, ಹಲ್ಲು, ಮೊದಲಾದವುಗಳಿಂದ) ಪುಡಿ ಯಾ ಹಿಟ್ಟು ಮಾಡು; ಅರೆ.
  2. ಕಾಡು; ಪೀಡಿಸು; ಹಿಂಸಿಸು; ಉಪದ್ರವ ಕೊಡು; ಅರೆದು ಬಿಡು; ಸುಲಿದು, ತೆರ ಹೊರಿಸಿ ತೊಂದರೆಪಡಿಸು: grinding tyranny ಪೀಡಕ ಪ್ರಭುತ್ವ; ಅರೆದುಬಿಡುವ ದಬ್ಬಾಳಿಕೆ.
  3. (ಬೀಸಿ) ಹಿಟ್ಟುಮಾಡು.
  4. ಮಸೆ; ಸಾಣೆಹಿಡಿ; ಉಜ್ಜಿ ನಯಮಾಡು ಯಾ ಚೂಪು ಮಾಡು: grind diamonds ವಜ್ರಗಳನ್ನು ಉಜ್ಜಿ ನಯಮಾಡು.
  5. (ಬೀಸುವ ಕಲ್ಲನ್ನು) ಬೀಸು; ತಿರುಗಿಸು.
  6. (‘ಹರ್ಡಿಗುರ್ಡಿ’ ಮೊದಲಾದ ವಾದ್ಯಗಳ) ಹಿಡಿ ತಿರುಗಿಸು.
  7. (‘ಹರ್ಡಿಗುರ್ಡಿ’, ಬ್ಯಾರಲ್‍ ಆರ್ಗನ್‍, ಮೊದಲಾದ ವಾದ್ಯಗಳನ್ನು) ನುಡಿಸು.
  8. (ಪಾಠ ಮೊದಲಾದವನ್ನು ವಿದ್ಯಾರ್ಥಿಗೆ) ಅರೆದು ಹೊಯ್ಯಿ; ಕಷ್ಟಪಟ್ಟು ಕಲಿಸು: after grinding him in Greek and Latin ಅವನಿಗೆ ಗ್ರೀಕ್‍ ಮತ್ತು ಲ್ಯಾಟಿನ್‍ ಅರೆದು ಹೊಯ್ದ ಮೇಲೆ.
  9. (ಕಿರುಗುಟ್ಟುವಂತೆ) ಉಜ್ಜು; ತಿಕ್ಕು; ಮಸೆ; ತೀಡು ( ಅಕರ್ಮಕ ಕ್ರಿಯಾಪದ ಸಹ): the ship was grinding on the rocks ಹಡಗು ಬಂಡೆಗಳಿಗೆ ತೀಡುತ್ತಿತ್ತು, ಮಸೆಯುತ್ತಿತ್ತು.
  10. ಕಟಕಟನೆ (ಹಲ್ಲು) ಮಸೆ, ಕಡಿ.
ಅಕರ್ಮಕ ಕ್ರಿಯಾಪದ
  1. (ಬೀಸಿ, ಅರೆದು) ಪುಡಿಮಾಡು; ಹಿಟ್ಟು ಮಾಡು.
  2. ಏಕಪ್ರಕಾರವಾಗಿ, ಒಂದೇ ಸಮನೆ – ದುಡಿ, ಹೆಣಗು, ಕಷ್ಟಪಡು: our fellows grind on the river or in the gymnasium ನಮ್ಮವರು ನದಿಯಲ್ಲೋ ಗರಡಿಮನೆಯಲ್ಲೋ ಒಂದೇ ಸಮನೆ ಹೆಣಗುತ್ತಾರೆ.
  3. (ಗುರುವಿನ ಬಳಿ) ಕಷ್ಟಪಟ್ಟು ಓದು, ವಿದ್ಯೆ ಕಲಿ: after grinding with tutors ಉಪಾಧ್ಯಾಯರ ಬಳಿ ಕಷ್ಟಪಟ್ಟು ಓದಿಯಾದ ಮೇಲೆ.
ನುಡಿಗಟ್ಟು
  1. an axe to grind.
  2. grind out an oath ಹಲ್ಲುಹಲ್ಲುಕಡಿಯುತ್ತ ಶಪಿಸು, ಶಪಥ ಮಾಡು.
  3. grind the faces of the poor ಬಡವರನ್ನು – ತುಳಿ, ಅರೆದುಬಿಡು, ಪೀಡಿಸು.
See also 1grind
2grind ಗ್ರೈನ್ಡ್‍
ನಾಮವಾಚಕ
  1. ಬೀಸುವುದು.
  2. ಉಜ್ಜುವುದು; ತಿಕ್ಕುವುದು; ಸಾಣೆ ಹಿಡಿಯುವುದು; ಅರೆತ; ಮಸೆತ.
  3. ಪುಡಿ ದಪ್ಪ; ಬೀಸಿದ, ಪುಡಿಮಾಡಿದ ಕಣಗಳ ಗಾತ್ರ.
  4. ಕಷ್ಟವಾದ, ಬೇಸರ ಹಿಡಿಸುವ, ಒಂದೇ ತರದ – ಕೆಲಸ, ದುಡಿಮೆ.
  5. ವ್ಯಾಯಾಮ ಸಂಚಾರ; ವ್ಯಾಯಾಮಕ್ಕಾಗಿ ನಡೆಯುವುದು.
  6. (ಹಳ್ಳಕೊಳ್ಳ, ಬೇಲಿ, ಮೊದಲಾದವನ್ನು ಹಾರಿ ಓಡಬೇಕಾದ) ಕುದುರೆಯ ಪಂದ್ಯ, ಜೂಜು.
  7. (ಕೇಂಬ್ರಿಜ್‍) ದೋಣಿ ದಾಟು; ಕಡವು.
  8. (ಅಮೆರಿಕನ್‍ ಪ್ರಯೋಗ) ಅಧ್ಯವಸಾಯಿ; ಹಗಲೂ ಇರುಳೂ ಕಷ್ಟಪಟ್ಟು ಓದುವ ವಿದ್ಯಾರ್ಥಿ.
  9. (ಅಶಿಷ್ಟ) ಸಂಭೋಗ; ಮೈಥುನ.
  10. (ಅಶಿಷ್ಟ) ನಿತಂಬ ಭ್ರಮಣ; ಕುಂಡೆ ತಿರುಗಣೆ; ನೃತ್ಯದಲ್ಲಿ ನರ್ತಕನು (ಯಾ ನರ್ತಕಿಯು) ನಿತಂಬಗಳನ್ನು ಸುತ್ತಲೂ ತಿರುಗಿಸುವುದು.
ನುಡಿಗಟ್ಟು

the daily grind (ಆಡುಮಾತು) ಒಬ್ಬನ – ದಿನಂಪ್ರತಿಯ ದುಡಿಮೆ; ದೈನಂದಿನ ಕೆಲಸ ಕಾರ್ಯ.