grim ಗ್ರಿಮ್‍
ಗುಣವಾಚಕ
  1. ಕಠಿಣ; ನಿರ್ದಯ; ಕ್ರೂರ: a grim battle ಕ್ರೂರ ಕಾಳಗ.
  2. ಉರಿಮೋರೆಯ, ಮುಸುಡಿಯ; ಉಗ್ರಮುಖದ: a grim man loving duty more than humanity ಮಾನವಕೋಟಿಗಿಂತ ತನಗೆ ಕರ್ತವ್ಯವೇ ಹೆಚ್ಚೆನ್ನುವ ಉರಿಮುಸುಡಿಯವ.
  3. (ಅನೇಕವೇಳೆ ಮೃತ್ಯುವಿನ ವಿಷಯದಲ್ಲಿ) ಕರಾಳ; ರೌದ್ರ; ಘೋರ.
  4. ಅನಿಷ್ಟಕರ; ಅನಿಷ್ಟಸೂಚಕ: a grim threat ಅನಿಷ್ಟಸೂಚಕ ಬೆದರಿಕೆ.
  5. ಕಠೋರ; ಭಯಾನಕ; ಭಯಂಕರ; ಭೀಕರ; ವಿಕಟ; ವಿಕಾರವಾದ: has a grim truth in it ಅದರಲ್ಲಿ ಒಂದು ಕಠೋರ ಸತ್ಯವಿದೆ. a grim smile ವಿಕಾರವಾದ ಹುಸಿನಗೆ.
  6. ಅಸಹ್ಯಕರ; ಅಹಿತಕರವಾದ.
ಪದಗುಚ್ಛ

hold on like grim death ಘೋರ ಮೃತ್ಯುವಿನಂತೆ ಬಿಗಿಯಾಗಿ, ಬಲವಾಗಿ ಹಿಡಿದುಕೊ.