See also 2grill  3grill  4grill
1grill ಗ್ರಿಲ್‍
ಸಕರ್ಮಕ ಕ್ರಿಯಾಪದ
  1. (ಕಬ್ಬಿಣದ ಸರಳುಚೌಕಟ್ಟಿನ ಮೇಲೆ) ಬೇಯಿಸು; ಸುಡು.
  2. (ರೂಪಕವಾಗಿ) ಸುಡುವುದರಿಂದ ಚಿತ್ರಹಿಂಸೆ ಕೊಡು.
  3. (ರೂಪಕವಾಗಿ) ಸುಡು; ತೀವ್ರಶಾಖಕ್ಕೆ, ತಾಪಕ್ಕೆ ಗುರಿಮಾಡು.
  4. (ಮುಖ್ಯವಾಗಿ ಪೊಲೀಸಿನವರು) ಬಹುವಾಗಿ ಪ್ರಶ್ನೆ ಕೇಳಿ ಪೀಡಿಸು, ಹಿಂಸಿಸು, ಹಿಂಸೆಗೆ ಗುರಿಮಾಡು.
  5. (ಸಿಂಪಿ ಮೊದಲಾದವನ್ನು) ಚಿಪ್ಪಿನೊಂದಿಗೆ ಬೇಯಿಸು.
ಅಕರ್ಮಕ ಕ್ರಿಯಾಪದ
  1. (ಕಬ್ಬಿಣದ ಸರಳು ಚೌಕಟ್ಟಿನ ಮೇಲೆ) ಬೇಯು; ಸುಡು.
  2. (ರೂಪಕವಾಗಿ) ಸುಡುವುದರಿಂದ ಚಿತ್ರಹಿಂಸೆಗೊಳಗಾಗು.
  3. ಸುಡು; ತೀವ್ರ ಶಾಖಕ್ಕೆ, ತಾಪಕ್ಕೆ – ಒಳಗಾಗು: you were walking in the cool shadow of the woods, while I sat grilling ನಾನು (ಬಿಸಿಲಿನಿಂದ) ಸುಟ್ಟುಹೋಗುತ್ತ ಕುಳಿತಿದ್ದಾಗ, ನೀನು ಕಾಡಿನ ತಂಪು ನೆರಳಿನಲ್ಲಿ ನಡೆಯುತ್ತಿದ್ದೆ. a grilling hot day ಸುಡುಸುಡು ಹಗಲು.
See also 1grill  3grill  4grill
2grill ಗ್ರಿಲ್‍
ನಾಮವಾಚಕ
  1. (ಸರಳುಕಾವಲಿಯ ಮೇಲೆ) ಬೇಯಿಸಿದ, ಸುಟ್ಟು ತಯಾರಿಸಿದ – ಆಹಾರ, ಭಕ್ಷ್ಯ.
  2. ಮಾಂಸದ ಹೋಳು ಮೊದಲಾದವನ್ನು ಸುಟ್ಟು ಬಡಿಸುವ ಕೋಣೆ.
  3. ಅನೌಪಚಾರಿಕ ಹೋಟೆಲು, ರೆಸ್ಟೊರಾಂಟು.
See also 1grill  2grill  4grill
3grill ಗ್ರಿಲ್‍
ನಾಮವಾಚಕ
  1. = gridiron (1).
  2. ಗ್ರಿಲ್ಲು; ಶಾಖವು ಕೆಳಭಾಗಕ್ಕೆ ಪ್ರಸಾರವಾಗುವಂತೆ ಕುಕ್ಕರಿಗೆ ಅಳವಡಿಸಿರುವ ಉಪಕರಣ, ಉದಾಹರಣೆಗೆ ಗ್ಯಾಸ್‍ ಬರ್ನರು, ಹಾಟ್‍ ಪ್ಲೇಟು, ಮೊದಲಾದವು.
See also 1grill  2grill  3grill
4grill ಗ್ರಿಲ್‍
ನಾಮವಾಚಕ

= grille.