grievance ಗ್ರೀವನ್ಸ್‍
ನಾಮವಾಚಕ
  1. ಸಂಕಟ; ದುಃಖ; ಪೀಡೆ: grievances illegally inflicted ಅಕ್ರಮವಾಗಿ ಕೊಡುವ ಪೀಡೆಗಳು.
  2. ಕೋಪ; ಸಿಡುಕು; ಅಸಮಾಧಾನ; ಅಸಂತೋಷ; ಅತೃಪ್ತಿ (ಇವುಗಳಿಂದುಂಟಾಗುವ ಮನಸ್ಸಿನ ಸ್ಥಿತಿ): a grievance against whistlers in public ಸಾರ್ವಜನಿಕ ಸ್ಥಳಗಳಲ್ಲಿ ಶಿಳ್ಳು ಹಾಕುವವರ ಮೇಲಿನ ಅಸಮಾಧಾನ, ಸಿಟ್ಟು.
  3. (ತನಗೆ ಅನ್ಯಾಯವಾಗಿದೆಯೆಂಬ) ಅಳಲು; ಬೇಗುದಿ; ಮನದುಬ್ಬರ; ಅತೃಪ್ತಿ; ಅಸಮಾಧಾನ; ಸಂಕಟಗಳನ್ನುಂಟುಮಾಡಿರುವರೆಂಬ ದೂರು: the grievance of taxation without representation ತಮಗೆ ಪ್ರಾತಿನಿಧ್ಯ ಕೊಡದೆ ತಮ್ಮಿಂದ ತೆರಿಗೆ ವಸೂಲಿ ಮಾಡುತ್ತಿದ್ದಾರೆಂಬ ದೂರು, ಅಳಲು, ಬೇಗುದಿ.
  4. (ಕೆಲಸಗಾರರ ವಿಷಯದಲ್ಲಿ) ವೃತ್ತಿಯಲ್ಲಿನ ಅನನುಕೂಲ, ಅಸೌಕರ್ಯ ಮೊದಲಾದವುಗಳು; ಕಷ್ಟನಿಷ್ಠುರಗಳು; ಕುಂದುಕೊರತೆಗಳು: failure to respect seniority was a major grievance ಸೇವಾ ಹಿರಿತನ ಉಳ್ಳವರಿಗೆ ಪುರಸ್ಕಾರ ಕೊಡುವುದಿಲ್ಲವೆಂಬ ದೂರು (ಕೆಲಸಗಾರರ) ಕುಂದುಕೊರತೆಗಳಲ್ಲಿ ಒಂದು ಮುಖ್ಯ ಅಂಶವಾಗಿದೆ.
  5. (ಯಜಮಾನನ ವರ್ತನೆಯ ವಿರುದ್ಧ ಕಾರ್ಮಿಕರ) ಅಸಮಾಧಾನ; ದೂರು.