grid ಗ್ರಿಡ್‍
ನಾಮವಾಚಕ
  1. ಗ್ರಿಡ್‍ ಜಾಲರಿ:
    1. ಸರಳುಗಳನ್ನು ಅಡ್ಡಡ್ಡಕ್ಕೂ ಉದ್ದುದ್ದಕ್ಕೂ ಸಮಾಂತರವಾಗಿ ಅಳವಡಿಸಿರುವ ಚೌಕಟ್ಟು.
    2. ಅದೇ ರೀತಿ ತಂತಿಗಳಿಂದ ತಯಾರಿಸಿದ ಚೌಕಟ್ಟು.
    3. ಕವಾಟದ ಧನದ್ವಾರಕ್ಕೂ ತಂತುವಿಗೂ ನಡುವಣ ತಂತಿ ಬಲೆ.
    4. ಮಿಲಿಟರಿ ನಕ್ಷೆಗಳಲ್ಲಿ ಸ್ಥಳ ನಿರ್ದೇಶನಕ್ಕಾಗಿ ಎಳೆದಿರುವ ಚೌಕಳಿ ಮನೆಗಳು.
    5. ವಿದ್ಯುಚ್ಛಕ್ತಿ ಸರಬರಾಜಿಗಾಗಿ ಏರ್ಪಡಿಸಿರುವ ವಾಹಕ ತಂತಿಗಳ ಬಲೆ.
    6. (ಅಡಿಗೆಗೆ, ಸುಡುವುದಕ್ಕೆ ಬಳಸುವ) ಸರಳು ತಡೆ.
    7. ಅನಿಲವನ್ನು ಸರಬರಾಜು ಮಾಡಲು ಏರ್ಪಡಿಸಿರುವ ಕೊಳವೆಗಳ ವ್ಯವಸ್ಥೆ.
  2. ಗೆರೆಜಾಲ; ಗೆರೆಗೂಡು; ರೇಖಾಕೋಷ್ಠ; ರೇಖಾಜಾಲರಿ; ಒಂದನ್ನೊಂದು ಲಂಬವಾಗಿ ಅಡ್ಡಹಾಯುವ, ಸಮಾಂತರದಲ್ಲಿರುವ ಮತ್ತು ಸಂಖ್ಯೆಗಳನ್ನು ಹಾಕಿರುವ ರೇಖೆಗಳ, ಮುಖ್ಯವಾಗಿ ನಕ್ಷೆಯಲ್ಲಿ ಸ್ಥಳಗಳನ್ನು ಗೊತ್ತುಪಡಿಸಲು ಬಳಸುವ ರೇಖೆಗಳ ಜಾಲ.
  3. ರೇಸು ಗೆರೆ, ಪಟ್ಟೆ; ಪಂದ್ಯದ ಕಾರುಗಳು ಹೊರಡುವಾಗ ಯಾವ ಯಾವ ಸ್ಥಳದಲ್ಲಿ ನಿಲ್ಲಬೇಕು ಎನ್ನುವುದನ್ನು ಸೂಚಿಸಲು ಕಾರುಗಳ ಪಥದ ಮೇಲೆ ಬಳಿದಿರುವ ರೇಖೆಗಳ ಜಾಲ, ಗೆರೆಪಟ್ಟೆಗಳು.
  4. = gridiron (1, 2, 3).
  5. ಆಯ – ವ್ಯವಸ್ಥೆ, ರಚನೆ; ಪಟ್ಟದ ರಸ್ತೆಗಳನ್ನು ರಚಿಸಿರುವ ಆಯಾಕಾರದ ವಿನ್ಯಾಸ, ವ್ಯವಸ್ಥೆ.