See also 2grey  3grey
1grey ಗ್ರೇ
ಗುಣವಾಚಕ
  1. ಬೂದು (ಬಣ್ಣದ); ನರೆ; ಬಿಳುಪಿಗೂ ಕಪ್ಪಿಗೂ ಮಧ್ಯಸ್ಥವಾದ ಬೂದಿಯಂಥ ಯಾ ಸೀಸದಂಥ ಬಣ್ಣದ.
  2. ನಸುಗತ್ತಲಾದ; ಮಸುಕಾದ; ಮಬ್ಬುಮಬ್ಬಾದ.
  3. ಮೋಡ ಕವಿದ.
  4. ಗೆಲವಿಲ್ಲದ; ಉಲ್ಲಾಸವಿಲ್ಲದ; ಆಶಾದಾಯಕವಲ್ಲದ; ನಿರುತ್ಸಾಹಕರ: a grey report ನಿರುತ್ಸಾಹಕರ ವರದಿ.
  5. ಮಂಕಾದ; ನಿಸ್ತೇಜ.
  6. (ವ್ಯಕ್ತಿ ಯಾ ವ್ಯಕ್ತಿಯ ಕೂದಲಿನ ವಿಷಯದಲ್ಲಿ) (ಮುಪ್ಪು ಮೊದಲಾದವುಗಳಿಂದ) ನರೆತ; ಬಿಳುಪಾದ; ನರೆ ತಿರುಗಿದ: a grey old man ಕೂದಲು ನರೆತ ಮುದಿಯ.
  7. ಪ್ರಾಚೀನ; ಪುರಾತನ; ಅನಾದಿ ಕಾಲದ.
  8. ಮುಪ್ಪಿನ; ಮುಪ್ಪಾದ; ವೃದ್ಧಾಪ್ಯದ.
  9. ನುರಿತ; ಪರಿಶ್ರಮವುಳ್ಳ; ಪಳಗಿದ; ಒಳ್ಳೆಯ ಅನುಭವವುಳ್ಳ; ಪರಿಪಕ್ವವಾದ: grey wisdom ಪರಿಪಕ್ವ ವಿವೇಕ.
  10. (ವ್ಯಕ್ತಿಯ ವಿಷಯದಲ್ಲಿ) ಅಜ್ಞಾತ; ಯಾರೆಂದು ತಿಳಿಯದ.
ನುಡಿಗಟ್ಟು

the grey mare is the better horse ಸಾವಿರ ಕುದುರೆ ಸರದಾರನಾದರೂ ಮನೆ ಹೆಂಡತಿ ಕಾಸದಾರ; ಹೆಂಡತಿ ಗಂಡನ ಮೇಲೆ ಅಧಿಕಾರ ನಡೆಸುತ್ತಾಳೆ.

See also 1grey  3grey
2grey ಗ್ರೇ
ನಾಮವಾಚಕ
  1. ಬೂದು ವಸ್ತ್ರ; ಬೂದು ಉಡುಪು, ಬಟ್ಟೆಗಳು: dressed in grey ಬೂದು ಬಟ್ಟೆ ಉಟ್ಟ.
  2. ಮುಂಜಾನೆಯ ಯಾ ಸಂಜೆಯ – ನಸುಕು, ಬೈಗು, ಮಬ್ಬು.
  3. ಬೂದು ಬಣ್ಣ.
  4. ಬೂದು ವರ್ಣದ್ರವ್ಯ.
  5. ಬೂದುಗುದುರೆ.
  6. (ಅಮೆರಿಕನ್‍ ಪ್ರಯೋಗ) (ನೀಗ್ರೋ ಅಶಿಷ್ಟ) ಬಿಳಿಯ; ಶ್ವೇತ ವರ್ಣೀಯ.
ಪದಗುಚ್ಛ
  1. Scot Greys (ಬ್ರಿಟಿಷ್‍ ಸೇನೆಯ) ‘ಡ್ರಗೂನ್ಸ್‍’ ಎಂಬ ಎರಡನೆಯ ಅಶ್ವದಳ.
  2. the Greys = ಪದಗುಚ್ಛ \((1)\).
See also 1grey  2grey
3grey ಗ್ರೇ
ಸಕರ್ಮಕ ಕ್ರಿಯಾಪದ
  1. ಬೂದು ಬಣ್ಣಕ್ಕೆ ತಿರುಗಿಸು; ಬೂದಾಗಿಸು.
  2. (ಛಾಯಾಚಿತ್ರಣ) (ಗಾಜಿನ ಮೇಲ್ಮೈಯನ್ನು) ಬೂದುಗೊಳಿಸು; ಮಸುಕುಮಾಡು.
  3. (ಛಾಯಾಚಿತ್ರಣ) (ವಿಷಮ ಚಿತ್ರದ ಮೇಲೆ ಮಸುಕು ಗಾಜನ್ನಿಡುವ ಮೂಲಕ ಛಾಯಾಚಿತ್ರವನ್ನು) ಮಸುಕುಮಾಡು; ಬೂದುಗೊಳಿಸು.
ಅಕರ್ಮಕ ಕ್ರಿಯಾಪದ
  1. ಬೂದುಬಣ್ಣವಾಗು; ಬೂದಾಗು; ಬೂದುಬಣ್ಣಕ್ಕೆ ತಿರುಗು.
  2. ಮಸುಕಾಗು.