grenadier ಗ್ರೆನಡಿಅರ್‍
ನಾಮವಾಚಕ
  1. (ಚರಿತ್ರೆ) ಕೈಬಾಂಬು ಯಾ ಸಿಡಿಗುಂಡು ಎಸೆಯುವ ಸೈನಿಕ.
  2. (ಬ್ರಿಟಿಷ್‍ ಪ್ರಯೋಗ) Grenadiers ಯಾ Grenadier Guards ಗ್ರೆನಡಿಯರ್‍ ದಳಗಳು; ಇಂಗ್ಲೆಂಡಿನ ಅರಮನೆಯ ಸೈನ್ಯದ ಪದಾತಿ ದಳಗಳಲ್ಲಿ ಮೊದಲ ದಳ.
  3. ಗ್ರೆನೇಡಿಯರ್‍ (ಹಕ್ಕಿ); ಕಪ್ಪು ಮತ್ತು ಕೆಂಪು ಗರಿಗಳಿರುವ ದಕ್ಷಿಣ ಆಹ್ರಿಕದ ಗೀಜಗನ ಹಕ್ಕಿ.
  4. ಮಕ್ರೌರಿಡೇ ವಂಶದ, ಉದ್ದವಾದ, ಕಿರಿದಾಗುತ್ತ ಹೋಗುವ ದೇಹವೂ ಚೂಪುಬಾಲವೂ ಉಳ್ಳ, ಆಳಸಮುದ್ರದ ಮೀನು.