greasy ಗ್ರೀಸಿ
ಗುಣವಾಚಕ
  1. ಜಿಡ್ಡುಬಳಿದ; ಗ್ರೀಸು ಸವರಿದ.
  2. ಜಿಡ್ಡುಳ್ಳ.
  3. ಜಿಡ್ಡಿನಿಂದಾದ.
  4. ಜಿಡ್ಡಿನಂಥ.
  5. ಅತಿ ಜಿಡ್ಡಿನ; ಜಿಡ್ಡುಜಿಡ್ಡಾದ.
  6. (ತುಪ್ಪಟದ ವಿಷಯದಲ್ಲಿ) ಜಿಡ್ಡು ತೊಳೆಯದ.
  7. (ಕುದುರೆಯ ವಿಷಯದಲ್ಲಿ) ಹಿಮ್ಮಡಿ ರೋಗ ತಗುಲಿದ.
  8. (ಕೆಸರಿನಿಂದಲೋ, ತೇವದಿಂದಲೋ) ಜಾರುತ್ತಿರುವ; ಜಾರಿಕೆಯ.
  9. (ನಡವಳಿಕೆಯ ಯಾ ಮುಖಭಾವದ ವಿಷಯದಲ್ಲಿ) ಬೆಣ್ಣೆಬೆಣ್ಣೆಯಾಗಿ ವರ್ತಿಸುವ; ಅತಿ ವಿನಯದ; ಕೃತಕ ನಯದ; ವಿನಯವೇಷದ.