See also 2grease
1grease ಗ್ರೀಸ್‍
ನಾಮವಾಚಕ
  1. (ಜಿಂಕೆ ಯಾ ಇತರ ಬೇಟೆಯ ಪ್ರಾಣಿಯ) ಕೊಬ್ಬು; ಚರಬಿ; ಮೇದಸ್ಸು.
  2. ಸತ್ತ ಪ್ರಾಣಿಗಳ ಕರಗಿಸಿದ (ಮುಖ್ಯವಾಗಿ ಮೆದುವಾಗಿರುವಾಗಿನ) ಕೊಬ್ಬು.
  3. ಗ್ರೀಸು; (ಮುಖ್ಯವಾಗಿ ಚಾಲನ ಸೌಕರ್ಯಕ್ಕಾಗಿ ಹೆರೆಯಾಗಿ, ಕಂದನೆಯಾಗಿ ಬಳಸುವ) ಜಿಡ್ಡಿನ ಯಾ ಕೊಬ್ಬಿನ ಪದಾರ್ಥ; ಚರಬಿ.
  4. ಉಣ್ಣೆಯಲ್ಲಿನ ಜಿಡ್ಡು.
  5. ಜಿಡ್ಡು ತೊಳೆಯುವ ಉಣ್ಣೆ; ಜಿಡ್ಡುತುಪ್ಪಟ.
  6. ಕುದುರೆಯ ಹಿಮ್ಮಡಿಯ ಒಂದು ರೋಗ.
ಪದಗುಚ್ಛ
  1. in grease (ಆಹಾರಕ್ಕಾಗಿ) ಕೊಲ್ಲಲು ಹದವಾದ; ಕೊಬ್ಬು ತುಂಬಿರುವ.
  2. in pride of grease = ಪದಗುಚ್ಛ \((1)\).
  3. in prime of grease = ಪದಗುಚ್ಛ \((1)\).
  4. wool in the grease ಉಣ್ಣೆ ತುಂಬಿದ ತುಪ್ಪಟ; ಕುರಿಯ ಮೈಮೇಲಿನ ಉಣ್ಣೆ.
See also 1grease
2grease ಗ್ರೀಸ್‍(ಸ್‍)
ಸಕರ್ಮಕ ಕ್ರಿಯಾಪದ
  1. ಜಿಡ್ಡನ್ನು – ಹಚ್ಚು, ಬಳಿ, ಸವರು, ಲೇಪಿಸು; ಗ್ರೀಸ್‍ ಹಾಕು.
  2. (ಬಾಣಲೆ ಮೊದಲಾದವಕ್ಕೆ) ಕೊಬ್ಬು ಬಳಿ.
  3. ಜಿಡ್ಡಿನಿಂದ ಕೊಳೆಮಾಡು; ಜಿಡ್ಡು ಜಿಡ್ಡು ಮಾಡು.
  4. ಜಿಡ್ಡಿನಿಂದ ಜಾರುವಂತೆ ಮಾಡು: grease the wheels ಚಕ್ರಗಳಿಗೆ ಜಿಡ್ಡುಹಚ್ಚಿ ಜಾರುವಂತೆ ಮಾಡು.
  5. ಕುದುರೆಗೆ ಹಿಮ್ಮಡಿ ರೋಗ – ಬರಿಸು, ಬರುವಂತೆ ಮಾಡು.
ನುಡಿಗಟ್ಟು
  1. grease palm of ಕೈ ಬೆಚ್ಚಗೆ ಮಾಡು; ಲಂಚ ಕೊಡು.
  2. grease the wheels (ರೂಪಕವಾಗಿ) (ಮುಖ್ಯವಾಗಿ ಲಂಚಕೊಟ್ಟು) ಕೆಲಸ ಸಲೀಸಾಗಿ ನಡೆಯುವಂತೆ ಮಾಡಿಕೊ.
  3. like greased lightning ಅತ್ಯಂತ ವೇಗವಾಗಿ; ಮಿಂಚಿಗೆ ಕಂದನೆ ಹಾಕಿದಂತೆ.