gravity ಗ್ರಾವಿಟಿ
ನಾಮವಾಚಕ
  1. ಘನತೆ; ಗಾಂಭೀರ್ಯ.
  2. ಪ್ರಾಧಾನ್ಯ; ಪ್ರಾಮುಖ್ಯ; ಮಹತ್ವ.
  3. ಗುರುತ್ವ; ಗುರುತರ ಸ್ಥಿತಿ; ಲಘುವಾಗಿಲ್ಲದಿರುವಿಕೆ; ತೀವ್ರತೆ: the gravity of the illness ಕಾಯಿಲೆಯ ತೀವ್ರತೆ. the gravity of his behaviour ಅವನ ನಡವಳಿಕೆಯ ಗುರುತ್ವ. the gravity of the responsibility ಹೊಣೆಗಾರಿಕೆಯ ಗುರುತರ ಸ್ಥಿತಿ.
  4. ತೂಕ; ಭಾರ.
  5. ಗುರುತ್ವ:
    1. ಯಾವುದೇ ಕಾಯವು ಭೂಮಿಯ ಕೇಂದ್ರದ ಕಡೆಗೆ ಆಕರ್ಷಿತವಾಗುವ ಬಲ.
    2. ಆ ಬಲದ ಪ್ರಮಾಣ.
    3. ಒಂದು ಕಾಯವು ಇನ್ನೊಂದರಿಂದ ಆಕರ್ಷಿತವಾಗುವ ತೀವ್ರತೆ.
ಪದಗುಚ್ಛ

specific gravity ವಿಶಿಷ್ಟ ಗುರುತ್ವ; ಸಾಪೇಕ್ಷ ಸಾಂದ್ರತೆ; ಯಾವುದೇ ಗಾತ್ರದ ಪದಾರ್ಥದ ತೂಕಕ್ಕೂ ಅದೇ ಗಾತ್ರದ ನೀರಿನ (ಅನಿಲಗಳ ವಿಷಯದಲ್ಲಿವಾಯುವಿನ) ತೂಕಕ್ಕೂ ಇರುವ ಪ್ರಮಾಣ.