gravitation ಗ್ರಾವಿಟೇಷನ್‍
ನಾಮವಾಚಕ
  1. ಗುರುತ್ವ:
    1. ಭೂಮಿಯ ಆಕರ್ಷಣೆಯ ಕಾರಣ ಕೆಳಗಡೆ ಇಳಿಯುವಿಕೆ: supply of water by gravitation ಗುರುತ್ವದಿಂದ ನೀರನ್ನು ಒದಗಿಸುವುದು.
    2. ವಿಶ್ವದಲ್ಲಿನ ಯಾವುದೇ ಎರಡು ಕಾಯಗಳು ಒಂದನ್ನೊಂದು ಆಕರ್ಷಿಸುವ ಭೌತ ಕಾರಣ.
  2. (ಯಾವುದೇ ದಿಕ್ಕಿನಲ್ಲಿ ಸಾಗುವ) ಪ್ರವೃತ್ತಿ; ಒಲವು.
ಪದಗುಚ್ಛ

law of gravitation ಗುರುತ್ವ ನಿಯಮ; ವಿಶ್ವದಲ್ಲಿನ ಯಾವುದೇ ಎರಡು ಕಾಯಗಳು ತಮ್ಮ ರಾಶಿಗಳ ಗುಣಲಬ್ಧಕ್ಕೆ ಅನುಲೋಮವಾದ ಮತ್ತು ಎರಡರ ನಡುವಣ ಅಂತರದ ವರ್ಗಕ್ಕೆ ವಿಲೋಮವಾದ ಬಲದಿಂದ ಒಂದನ್ನೊಂದು ಆಕರ್ಷಿಸುತ್ತವೆ ಎಂಬ ನ್ಯೂಟನ್ನನ ನಿಯಮ.