See also 2gravel
1gravel ಗ್ರಾವ(ವ್‍)ಲ್‍
ನಾಮವಾಚಕ
  1. (ದಾರಿಗಳನ್ನೂ ರಸ್ತೆಗಳನ್ನೂ ಮಾಡಲು ಬಳಸುವ) ಜಲ್ಲಿ (ಕಲ್ಲು); ಗರಸು; ಕಂಕರೆ; ಗ್ರ್ಯಾವಲ್ಲು.
  2. (ಭೂವಿಜ್ಞಾನ, ಗಣಿ.) ಜಲ್ಲಿಸ್ತರ (ಮುಖ್ಯವಾಗಿ ಚಿನ್ನವಿರುವಂತಹುದು).
  3. (ರೋಗಶಾಸ್ತ್ರ) ಅಶ್ಮರೀರೋಗ; ಕಲ್ಲುಬೇನೆ; ಮೂತ್ರಪಿಂಡಗಳಲ್ಲಿ ಮತ್ತು ಮೂತ್ರಕೋಶದಲ್ಲಿ ಹರಳುಗಳು ಸೇರಿಕೊಳ್ಳುವ ರೋಗ.
ಪದಗುಚ್ಛ

pay gravel ಲಾಭ ಸಿಕ್ಕುವಷ್ಟು ಚಿನ್ನವಿರುವ ಜಲ್ಲಿಸ್ತರ.

See also 1gravel
2gravel ಗ್ರಾವ(ವ್‍)ಲ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ gravelled, ವರ್ತಮಾನ ಕೃದಂತ gravelling).
  1. ಗರಸು ಹಾಕು; ಜಲ್ಲಿ ಹರವು.
  2. ತಬ್ಬಿಬ್ಬು ಮಾಡು; ದಿಗ್ಭ್ರಮೆ ಹಿಡಿಸು; ಏನೂ ತೋರದಂತೆ ಮಾಡು.