See also 2grave  3grave  4grave  5grave
1grave ಗ್ರೇವ್‍
ನಾಮವಾಚಕ

ಸಮಾಧಿ; ಗೋರಿ; ಶವವನ್ನು ಹೂಳಲು ಅಗೆದ ಗುಂಡಿ, ಕುಳಿ ಯಾ ಅದರ ಮೇಲಣ ದಿಬ್ಬ ಯಾ ಸ್ಮಾರಕ.

  1. ಸತ್ತಸ್ಥಿತಿ; ಮೃತಾವಸ್ಥೆ; ಸಾವು; ಮರಣ; ಮೃತ್ಯು.
  2. ಮೃತ್ಯುಲೋಕ.
  3. (ರೂಪಕವಾಗಿ) ಸಮಾಧಿ (ರೂಪದ ಯಾವುದೇ ವಸ್ತು, ಆಶ್ರಯ): watery grave ಜಲಸಮಾಧಿ. the grave of many reputations ಎಷ್ಟೋ ಜನರ ಕೀರ್ತಿ ಸಮಾಧಿ, ಹೆಸರು ಮಣ್ಣು ಪಾಲಾಗುವಂತೆ ಮಾಡಿರುವ ವಿಷಯ.
  4. (ಆಲೂಗೆಡ್ಡೆ ಮೊದಲಾದವನ್ನು ಹೂಳಲು ಅಗೆದ) ಸಾಲುಗುಂಡಿ.
ನುಡಿಗಟ್ಟು
  1. dig grave of
    1. ಸಮಾಧಿ ತೋಡು; ಗೋರಿ – ಅಗೆ, ತೆಗೆ.
    2. ಒಬ್ಬನ ಪತನಕ್ಕೆ ಕಾರಣವಾಗು; ಒಬ್ಬನನ್ನು ಉರುಳಿಸು.
  2. have one foot in the grave ಸಾವಿನ ಹೊಸ್ತಿಲಲ್ಲಿರು; ಊರಲ್ಲೊಂದು ಕಾಲು ಕಾಡಲ್ಲೊಂದು ಕಾಲು; ಊರು ಹೋಗು ಎನ್ನು ಕಾಡು ಬಾ ಎನ್ನು; ಸಮಾಧಿಯಲ್ಲಿ ಒಂದು ಕಾಲಿಟ್ಟಿರು; ಬಹಳ ವಯಸ್ಸಾಗಿರು.
  3. make one turn in his grave ಸತ್ತವನ ಸಮಾಧಿಯಲ್ಲಿ ನರಳುವಂತೆ ಮಾಡು; ಸತ್ತವನಿಗೂ ಅಸಹ್ಯವಾಗುವಂಥ ಆಘಾತವುಂಟುಮಾಡು (ಅವನು ಬದುಕಿದ್ದಾಗ ಹೇಸಿಕೊಳ್ಳುತ್ತಿದ್ದಂಥ ವಿಷಯದಲ್ಲಿ).
  4. secret as the grave ಸಮಾಧಿಗುಟ್ಟಿನ; ಅತಿ ರಹಸ್ಯವಾದ.
  5. someone walking on my grave ಯಾರೋ ನನ್ನ ಸಮಾಧಿಯ ಮೇಲೆ ನಡೆಯುತ್ತಿದ್ದಾರೆ ಅನ್ನಿಸುತ್ತದೆ (ಒಬ್ಬನಿಗೆ ಏಕೆಂದು ಹೇಳಲಾಗದೆ ಮೈ ನಡುಕವುಂಟಾದಾಗ ಹೇಳುವ ಮಾತು.).
See also 1grave  3grave  4grave  5grave
2grave ಗ್ರೇವ್‍
ಸಕರ್ಮಕ ಕ್ರಿಯಾಪದ
(ಭೂತಕೃದಂತ graven ಯಾ graved).
  1. (ಪ್ರಾಚೀನ ಪ್ರಯೋಗ) ಹೂಳು (ಭೂತಕೃದಂತ graved ಮಾತ್ರ).
  2. (ವಾಸ್ತುಶಿಲ್ಪ) (ಹಿನ್ನೆಲೆಯಾಗಿ ಬಳಸುವ ಸಾಮಗ್ರಿಯನ್ನು, ಪ್ರತಿಮೆಯನ್ನು) ಕೊರೆ; ಕೆತ್ತು; ಕಡೆ; ಕಂಡರಿಸು (ಭೂತಕೃದಂತ graven ಯಾ graved): graven image ಕೆತ್ತಿದ, ಕಡೆದ – ಪ್ರತಿಮೆ, ವಿಗ್ರಹ, ಮೂರ್ತಿ.
  3. (ರೂಪಕವಾಗಿ) (ಮನಸ್ಸಿನಲ್ಲಿ, ಮನಸ್ಸಿನ ಮೇಲೆ) ಕೆತ್ತು; ಕೊರೆ; ಅಚ್ಚೊತ್ತು (ಭೂತಕೃದಂತ graven, graved).
See also 1grave  2grave  4grave  5grave
3grave ಗ್ರೇವ್‍
ಗುಣವಾಚಕ
  1. ಮುಖ್ಯ; ಪ್ರಮುಖ; ಪ್ರಧಾನ.
  2. ಘನ; ತೂಕವಾದ; ಗುರುತರ.
  3. ತೀವ್ರ ಆಲೋಚನೆ ಅಗತ್ಯವಾದ.
  4. (ತಪ್ಪುಗಳು, ಕಷ್ಟಗಳು, ಹೊಣೆಗಾರಿಕೆಗಳು ಮತ್ತು ರೋಗದ ಯಾ ಅಪಾಯದ ಲಕ್ಷಣಗಳು, ಮೊದಲಾದವುಗಳ ವಿಷಯದಲ್ಲಿ)
    1. ಎದುರಿಸಲಾಗದ; ಅಸಾಧ್ಯ; ದುರ್ಗಮ.
    2. ಭಯಂಕರ; ಭೀಕರ; ದಿಗಿಲು ಹುಟ್ಟಿಸುವ; ಗಾಬರಿ ಹುಟ್ಟಿಸುವ.
    3. ಉಗ್ರ; ತೀವ್ರ; ಗಂಭೀರ; ವಿಷಮ.
  5. (ವ್ಯಕ್ತಿಗಳು, ಅವರ ನಡತೆ, ಮುಖಭಾವ, ಮಾತು, ನಡವಳಿಕೆ, ಮೊದಲಾದವುಗಳ ವಿಷಯದಲ್ಲಿ) ಗಂಭೀರ; ನಿರಾಡಂಬರ; ಸರಳ; ಬೆಡಗು – ಬಣ್ಣ ಇಲ್ಲದ; ಥಳಥಳಿಸದ; ಥಳುಕುಪಳುಕಿಲ್ಲದ.
  6. (ಸ್ಥಾಯಿಯ ವಿಷಯದಲ್ಲಿ) ಮಧ್ಯಮ ಯಾ ಮಂದ್ರಸ್ಥಾಯಿಯ; ತಾರವಲ್ಲದ; ಗಂಭೀರ: the thicker the string, the graver the tone ತಂತಿ ದಪ್ಪನಾಗಿದ್ದಷ್ಟೂ ನಾದ ಗಂಭೀರವಾಗಿರುತ್ತದೆ.
  7. (ಭಾಷಾಶಾಸ್ತ್ರ) (ಸ್ವರದ ವಿಷಯದಲ್ಲಿ) ಅನುದಾತ್ತ: grave accent ಅನುದಾತ್ತ ಸ್ವರ.
See also 1grave  2grave  3grave  5grave
4grave ಗ್ರಾವ್‍
ನಾಮವಾಚಕ
See also 1grave  2grave  3grave  4grave
5grave ಗ್ರೇವ್‍
ಸಕರ್ಮಕ ಕ್ರಿಯಾಪದ

(ಚರಿತ್ರೆ) (ಹಡಗು ನೆಲದ ಮೇಲೆ ಯಾ ಒಣ ಕಟ್ಟೆಯಲ್ಲಿ ಇರುವಾಗ ಅದರ ತಳಕ್ಕೆ ಹತ್ತಿಕೊಂಡು ರಾಶಿಗೂಡಿರುವ ಕಸ ಸುಟ್ಟು, ಟಾರ್‍ ಬಳಿದು) ಹಡಗಿನ ತಳ ಚೊಕ್ಕಟ ಮಾಡು.