gratify ಗ್ರಾಟಿಹೈ
ಸಕರ್ಮಕ ಕ್ರಿಯಾಪದ
  1. (ಪ್ರಾಚೀನ ಪ್ರಯೋಗ) ಸಾಮಾನ್ಯವಾಗಿ (ಹಣರೂಪದಲ್ಲಿ) ಪ್ರತಿಫಲ ಯಾ ಸಂಭಾವನೆ, ರುಸುಮು ಯಾ ಶುಲ್ಕ, ಕೊಡುಗೆ ಯಾ ಬಹುಮಾನ – ಕೊಡು.
  2. (ಪ್ರಾಚೀನ ಪ್ರಯೋಗ) ಲಂಚ ಕೊಡು; ರುಷುವತ್ತು ಕೊಡು.
  3. ಸಂತೋಷಪಡಿಸು; ತಣಿಸು; ತೃಪ್ತಿಪಡಿಸು; ಆನಂದಗೊಳಿಸು; ಹರ್ಷಗೊಳಿಸು.
  4. ಕೋರಿದ್ದನ್ನು ಸಲ್ಲಿಸಿ ಸಂತೋಷಪಡಿಸು.
  5. (ಒಬ್ಬರು) ಬಯಸಿದ್ದಕ್ಕೆ ಸಮ್ಮತಿಸು; (ಒಬ್ಬರ) ಬಯಕೆ ನೆರವೇರಿಸು.
  6. (ಆಶೆ, ಮನೋಭಾವ, ಮನಃಪ್ರವೃತ್ತಿ – ಇವುಗಳನ್ನು) ತಡೆಯಿಲ್ಲದೆ ಹೋಗಬಿಡು; ಸ್ವಚ್ಛಂದವಾಗಿ ಹರಿಯಬಿಡು.