grated ಗ್ರೇಟಿಡ್‍
ಗುಣವಾಚಕ
  1. ಜಾಲರಿಯುಳ್ಳ:
    1. ಸಮಾಂತರವಾಗಿ ಯಾ ಒಂದನ್ನೊಂದು ಅಡ್ಡ ಹಾಯುವಂತೆ ಜೋಡಿಸಿರುವ ಮರದ ಯಾ ಲೋಹದ ಸರಳುಗಳುಳ್ಳ.
    2. ವಿವರ್ತನೆಯ (diffraction) ಮೂಲಕ ರೋಹಿತವನ್ನು ಉತ್ಪತ್ತಿಮಾಡಲು ಸಮಾಂತರ ಗೆರೆಗಳನ್ನೆಳೆದಿರುವ.
  2. (ಬೆಂಕಿಗೂಡಿನ ಯಾ ಒಲೆಯ ವಿಷಯದಲ್ಲಿ) ಸರಳಿನ ತಡೆ ಯಾ ಚೌಕಟ್ಟು ಹಾಕಿರುವ.