See also 2grate
1grate ಗ್ರೇಟ್‍
ನಾಮವಾಚಕ
  1. (ವಿರಳ ಪ್ರಯೋಗ) ಜಾಲರಿ:
    1. ಸಮಾಂತರವಾಗಿ ಯಾ ಒಂದನ್ನೊಂದು ಅಡ್ಡಹಾಯುವಂತೆ ಜೋಡಿಸಿರುವ ಮರದ ಯಾ ಲೋಹದ ಸರಳುಗಳ ವ್ಯವಸ್ಥೆ.
    2. (ದೃಗ್‍ವಿಜ್ಞಾನ) ವಿವರ್ತನೆಯ (diffraction) ಮೂಲಕ ರೋಹಿತವನ್ನು ಉತ್ಪತ್ತಿ ಮಾಡಲು ಜೋಡಿಸಿರುವ ಸಮಾಂತರ ತಂತಿಗಳ ತಂಡ ಯಾ ಗಾಜಿನ ಮೇಲೆ ಎಳೆದಿರುವ ಸಮಾಂತರ ಗೆರೆಗಳು.
  2. (ಬೆಂಕಿಗೂಡಿನಲ್ಲಿ, ಒಲೆಯಲ್ಲಿ ಯಾ ಕುಲುಮೆಯಲ್ಲಿ ಉರುವಲು ಹೊರಕ್ಕೆ ಬೀಳದಂತೆ ತಡೆಯುವ) ಸರಳಿನ ಚೌಕಟ್ಟು; (ಬೆಂಕಿಯ) ಸರಳು ತಡೆ.
  3. ಒಲೆ ಯಾ ಕುಲುಮೆ.
See also 1grate
2grate ಗ್ರೇಟ್‍
ಸಕರ್ಮಕ ಕ್ರಿಯಾಪದ
  1. ತುರಿ; ಹೆರೆ; ಒರಟಾದ ಹೊರಮೈ ಮೇಲೆ ಉಜ್ಜುವುದರಿಂದ ಸಣ್ಣ ಸಣ್ಣ ಕಗಳನ್ನಾಗಿ, ರಜಗಳನ್ನಾಗಿ ಮಾಡು.
  2. (ಹಲ್ಲು) ಕಡಿ; ಮಸೆ.
  3. ಕರ್ಕಶ ಶಬ್ದವಾಗುವಂತೆ ಒಂದರ ಮೇಲೆ ಉಜ್ಜು.
ಅಕರ್ಮಕ ಕ್ರಿಯಾಪದ
  1. ಮನಸ್ಸಿಗೆ – ಅಹಿತವಾಗು, ಕಿರಿಕಿರಿಯುಂಟುಮಾಡು: you have a knack for choosing what grates on the mind ಮನಸ್ಸಿಗೆ ಅಹಿತವಾಗುವಂಥದನ್ನೇ ಆರಿಸುವುದರಲ್ಲಿ ನೀನು ಕುಶಲ.
  2. ಕರ್ಕಶ ಶಬ್ದವಾಗುವಂತೆ ಒಂದರ ಮೇಲೆ ಉಜ್ಜು.
  3. ಗಡಸಾಗಿ, ಕರ್ಕಶವಾಗಿ, ಪರುಷವಾಗಿ – ಶಬ್ದವಾಗು, ಸದ್ದಾಗು: a grating laugh ಗಡಸಾದ, ಕರ್ಕಶವಾದ ನಗು.
  4. (ಕೀಲು ಮೊದಲಾದವು) ಕರ್ರೆನ್ನು; ಕಿರುಗುಟ್ಟು.