See also 2grass
1grass ಗ್ರಾಸ್‍
ನಾಮವಾಚಕ
  1. ಹುಲ್ಲು; ತೃಣ.
  2. (ಸಸ್ಯವಿಜ್ಞಾನ) ತೃಣವರ್ಗ; (ಆಹಾರಧಾನ್ಯಗಳು, ಜೊಂಡುಗಳು ಮತ್ತು ಬಿದಿರುಗಳನ್ನು ಒಳಗೊಂಡ ಯಾವುದೇ) ಹುಲ್ಲಿನ ಜಾತಿ.
  3. (ಅಶಿಷ್ಟ) = asparagus.
  4. ಮೇವು.
  5. ಹುಲ್ಲುಗಾವಲು; ಗೋಮಾಳ.
  6. ಮೇವಿನ ಜಮೀನು.
  7. ಹುಲ್ಲು (ಬೆಳೆದಿರುವ) ನೆಲ: keep off the grass ಹುಲ್ಲು ಬಿಟ್ಟು ನಡೆ; ಹುಲ್ಲು ತುಳಿಯಬೇಡ; ಹುಲ್ಲಿನಿಂದಾಚೆ ಇರು.
  8. (ಗಣಿಗಾರಿಕೆ) ಗಣಿಯ ಬಾಯಿ ಯಾ ಬಾಯಿಯ ಸುತ್ತಣ ಜಾಗ.
  9. (ಅಶಿಷ್ಟ) = marijuana.
  10. (ಅಶಿಷ್ಟ) ಪೊಲೀಸ್‍ ಇಲಾಖೆಗೆ ಅಪರಾಧದ ಯಾ ಅಪರಾಧಿಯ ಸುಳಿವು ತಿಳಿಸುವವ.
ಪದಗುಚ್ಛ
  1. be at grass ಹುಲ್ಲುಗಾವಲಿನಲ್ಲಿ (ಮೇಯುತ್ತ) ಇರು, ಮೇವಿನಲ್ಲಿರು.
  2. go to grass ಹುಲ್ಲುಗಾವಲಿಗೆ ಹೋಗು; ಮೇವಿಗೆ ಹೋಗು.
  3. put to grass ಗೋಮಾಳಕ್ಕೆ ಕಳುಹಿಸು; ಮೇವಿಗೆ ಹೋಗು, ಕಳುಹಿಸು.
  4. send to grass = ಪದಗುಚ್ಛ \((3)\).
  5. turn to grass ಗೋಮಾಳಕ್ಕೆ, ಮೇವಿಗೆ ಅಟ್ಟು.
ನುಡಿಗಟ್ಟು
  1. at grass ಕೆಲಸವಿಲ್ಲದೆ; ಬಿಡುವಾಗಿ; ಹಾಯಾಗಿ; ವಿರಾಮಸುಖ ಅನುಭವಿಸುತ್ತ.
  2. go to grass (ವ್ಯಕ್ತಿ) ಹೊಡೆತ ತಿಂದು ಬೀಳು; ನೆಲಕ್ಕುರುಳು.
  3. let the grass grow under one’s feet ಕೆಲಸದಲ್ಲಿ ಚಚ್ಚರವಾಗಿರು, ಚಚ್ಚರವಹಿಸು, ತಡಮಾಡಬೇಡ, ಶೀಘ್ರವಾಗಿ ವರ್ತಿಸು, ಫಕ್ಕನೆ ಅವಕಾಶ ಹಿಡಿದುಕೊ.
  4. hear the grass grow ಅಸಾಧಾರಣವಾದ, ಲೋಕೋತ್ತರವಾದ ಸೂಕ್ಷ್ಮಗ್ರಹಣಶಕ್ತಿ ಪಡೆದಿರು; ಕುಶಾಗ್ರಬುದ್ಧಿಯುಳ್ಳವನಾಗಿರು; ಅದ್ಭುತವಾಗಿ ಚುರುಕಾಗಿರು.
  5. send to grass (ವ್ಯಕ್ತಿಯನ್ನು) ಹೊಡೆದುರುಳಿಸು; ನೆಲಕ್ಕುರುಳಿಸು.
See also 1grass
2grass ಗ್ರಾಸ್‍
ಸಕರ್ಮಕ ಕ್ರಿಯಾಪದ
  1. (ಪ್ರದೇಶವೊಂದರ ಮೇಲೆ) ಹುಲ್ಲು ಬೆಳೆಸು; ಹುಲ್ಲುಹೆಪ್ಪು ಬೆಳೆ.
  2. (ಅಗಸೇನಾರು ಮೊದಲಾದವನ್ನು) ಬಿಳಿಚಿಸಲು ಹುಲ್ಲಿನ ಮೇಲೆ ಹರವು, ಹರಡು.
  3. (ಎದುರಾಳಿಯನ್ನು) ಹೊಡೆದುರುಳಿಸು; ಹೊಡೆದು ನೆಲದ ಮೇಲೆ ಕೆಡವು, ಉರುಳಿಸು.
  4. (ಮೀನನ್ನು) ದಡಕ್ಕೆ ತರು; ದಡದ ಮೇಲಕ್ಕೆ ತರು.
  5. (ಹಕ್ಕಿಯನ್ನು ಗುಂಡೇಟಿನಿಂದ) ಹೊಡೆದು ಕೆಡವು; ನೆಲಕ್ಕೆ ಬೀಳಿಸು.
  6. (ಅಮೆರಿಕನ್‍ ಪ್ರಯೋಗ) (ಪ್ರಾಣಿಗೆ ಯಾ ಪ್ರಾಣಿಗಳಿಗೆ ಮೇಯಲು) ಹುಲ್ಲುಗಾವಲು, ಹುಲ್ಲು – ಒದಗಿಸು.
  7. (ಅಶಿಷ್ಟ) (ಒಬ್ಬನನ್ನು) ಮೋಸದಿಂದ ಒಪ್ಪಿಸು; (ಒಬ್ಬನಿಗೆ) ವಿಶ್ವಾಸದ್ರೋಹ ಮಾಡು.
ಅಕರ್ಮಕ ಕ್ರಿಯಾಪದ

(ಅಶಿಷ್ಟ) ಪೊಲೀಸರಿಗೆ (ಅಪರಾಧದ ಯಾ ಅಪರಾಧಿಯ) ಸುಳಿವು ಕೊಡು.