See also 2grasp
1grasp ಗ್ರಾಸ್ಪ್‍
ಸಕರ್ಮಕ ಕ್ರಿಯಾಪದ
  1. ಆತುರದಿಂದ ಯಾ ದುರಾಶೆಯಿಂದ ಕಸಿದುಕೊ; ದುರಾಶೆಯಿಂದ ವಶಪಡಿಸಿಕೊ.
  2. ಭದ್ರವಾಗಿ ಹಿಡಿ; ಬಿಗಿಯಾಗಿ ಹಿಡಿ.
  3. ಮನಸ್ಸಿನಿಂದ – ಗ್ರಹಿಸು, ಅರಿ: grasped the rudiments of the subject ವಿಷಯದ ಮೂಲ ತತ್ತ್ವಗಳನ್ನು ಗ್ರಹಿಸಿದ, ಅರಿತುಕೊಂಡ.
ಅಕರ್ಮಕ ಕ್ರಿಯಾಪದ

ಹಿಡಿದುಕೊಳ್ಳಲು ಯತ್ನಿಸು: like a drowning man grasping at a straw ಮುಳುಗುತ್ತಿರುವವನು ಒಂದು ಹುಲ್ಲುಕಡ್ಡಿಯನ್ನೇ ಹಿಡಿದುಕೊಳ್ಳಲು ಯತ್ನಿಸುವಂತೆ.

ನುಡಿಗಟ್ಟು

grasp the nettle ಮುಳ್ಳು ಹಿಡಿ; ಕಷ್ಟವನ್ನು ಯಾ ಅಪಾಯವನ್ನು ಧೈರ್ಯದಿಂದ ಎದುರಿಸು.

See also 1grasp
2grasp ಗ್ರಾಸ್ಪ್‍
ನಾಮವಾಚಕ
  1. ಭದ್ರವಾದ ಹಿಡಿತ; ಬಿಗಿಹಿಡಿತ; ಕಪಿಮುಷ್ಟಿ: within one’s grasp ಹಿಡಿತಕ್ಕೆ ಸಿಕ್ಕುವ, ಎಟಕುವ. beyond one’s grasp ಹಿಡಿತಕ್ಕೆ ಸಿಕ್ಕದ, ಮೀರಿದ (ರೂಪಕವಾಗಿ ಸಹ).
  2. ವಶ; ಹತೋಟಿ; ಹಿಡಿತ; ಪ್ರಭುತ್ವ; ಸ್ವಾಧೀನ: grasp of death ಮೃತ್ಯುವಶ.
  3. ಗ್ರಹಿಕೆ; ಅರಿವು; ಮನವರಿಕೆ; ಸಮಗ್ರ ಜ್ಞಾನ; ಜ್ಞಾನವ್ಯಾಪ್ತಿ; ಬುದ್ಧಿ ವ್ಯಾಪ್ತಿ: his mind takes into its grasp the immensity of the science ಆ ಶಾಸ್ತ್ರದ ಅಗಾಧ ವಿಷಯವನ್ನೆಲ್ಲ ಅವನ ಮನಸ್ಸು ಸಮಗ್ರವಾಗಿ ಗ್ರಹಿಸುತ್ತದೆ, ವಶಮಾಡಿಕೊಳ್ಳುತ್ತದೆ.