See also 2grapple
1grapple ಗ್ರಾಪ್‍ಲ್‍
ನಾಮವಾಚಕ
  1. = grapnel.
  2. ಕುಸ್ತಿಗಾರರ, ಜಟ್ಟಿಗಳ (ಯಾ ಅವರ ಹಿಡಿತದಂಥ) ಬಿಗಿಹಿಡಿತ.
  3. ಮುಷ್ಟಾಮುಷ್ಟಿ; ಹಸ್ತಾಹಸ್ತಿ; ಕೈಕೈ ಕಾಳಗ; ಕೈಕೈ ಮಿಲಾಯಿಸಿ ಹೋರಾಡುವುದು.
See also 1grapple
2grapple ಗ್ರಾಪ್‍ಲ್‍
ಸಕರ್ಮಕ ಕ್ರಿಯಾಪದ
  1. ಗ್ರ್ಯಾಪ್‍ನಲ್‍ನಲ್ಲಿ (ಯಾ ಅದರಲ್ಲಿ ಹಿಡಿದಂತೆ) ಹಿಡಿದೆಳೆದುಕೊ ಯಾ ಬಿಗಿಯಾಗಿ ಹಿಡಿ.
  2. (ಕೈಗಳಿಂದ) ಹಿಡಿದುಕೊ; ಬಿಗಿ ಹಿಡಿ.
  3. ಕೈಕೈ ಹತ್ತು, ಮಿಲಾಯಿಸು.
ಅಕರ್ಮಕ ಕ್ರಿಯಾಪದ

ಕೈಕೈ ಮಿಲಾಯಿಸಿ – ಹೋರಾಡು, ಕಾಳಗ ಮಾಡು.

ನುಡಿಗಟ್ಟು

grapple with ಜಯಿಸಲು, ಸಾಧಿಸಲು ಯತ್ನಿಸು ಯಾ ಎದುರಿಸು: science grapples with such startling phenomena ವಿಜ್ಞಾನವು ಇಂತಹ ಬೆಚ್ಚಿಬೀಳಿಸುವ ವಿದ್ಯಮಾನಗಳನ್ನು ಎದುರಿಸಲು ಯತ್ನಿಸುತ್ತದೆ.