grapheme ಗ್ರಾಹೀಮ್‍
ನಾಮವಾಚಕ

(ಭಾಷಾಶಾಸ್ತ್ರ)

  1. ಲಿಪಿಮೆ; ಗ್ರಾಹೀಮು; ಯಾವುದೇ ಭಾಷೆಯ ಬರವಣಿಗೆ ವ್ಯವಸ್ಥೆಯ ಮೂಲಮಾನ, ಕನಿಷ್ಠ ಏಕಮಾನ; ಅರ್ಥಬದ್ಧವಾಗಿರುವಂತೆ ಇನ್ನೂ ಹೆಚ್ಚಿನ ಸಂಖ್ಯೆಯ ಘಟಕಗಳಾಗಿ ಒಡೆಯಲಾಗದ ಬರವಣಿಗೆಯ ಅಂಶ; ಅಕ್ಷರಿಮೆ; ವರ್ಣಿಮೆ.
  2. ಲಿಪಿ; ಅಕ್ಷರ; ವರ್ಣ; ಭಾಷೆಯ ಧ್ವನಿಮೆಯೊಂದನ್ನು ಬರಹದಲ್ಲಿ ಸಂಕೇತಿಸುವ ಅಕ್ಷರ ಮೊದಲಾದ ಚಿಹ್ನೆಗಳು ಯಾ ಅವುಗಳ ವರ್ಗ.