grapevine ಗೆಪ್‍ವೈನ್‍
ನಾಮವಾಚಕ
  1. ದ್ರಾಕ್ಷಿಬಳ್ಳಿ; ದ್ರಾಕ್ಷಾಲತೆ.
  2. ದ್ರಾಕ್ಷಿಬಳ್ಳಿ; ಸ್ಕೇಟಿಂಗ್‍ ಆಟದಲ್ಲಿ ಎರಡು ಅಡಿಗಳನ್ನೂ ಹಿಮದ ಮೇಲಿಟ್ಟು ಬಳ್ಳಿ ಬಳ್ಳಿಯಾಗಿ ರಚಿಸುವ ಆಕೃತಿ.
  3. ಗುಟ್ಟುಬಳ್ಳಿ; ಗುಪ್ತತಂತಿ; ಗುಪ್ತ (ಸುದ್ದಿ) ಮಾಧ್ಯಮ; ರಹಸ್ಯ (ವದಂತಿ) ಮಾಧ್ಯಮ; ವದಂತಿಗಳು, ಬೇರೆ ರೀತಿಯಲ್ಲಿ ತಿಳಿಯಲಾಗದ ರಹಸ್ಯ ಸಮಾಚಾರಗಳು ತಿಳಿಯಬರುವ ಯಾ ಪ್ರಚಾರವಾಗುವ, ವ್ಯಕ್ತಿಯಿಂದ ವ್ಯಕ್ತಿಗೆ ಬಾಯಿಯ ಮೂಲಕದ ಮೊದಲಾದ ವಿಧಾನ ಯಾ ಮಾಧ್ಯಮ: I heard on the grapevine that he is to be promoted ಅವನಿಗೆ ಬಡ್ತಿ ಸಿಗುತ್ತದೆಂದು ನಾನು ಗುಪ್ತ ಮಾಧ್ಯಮದಿಂದ ಕೇಳಿದೆ.