grape ಗ್ರೇಪ್‍
ನಾಮವಾಚಕ
  1. (ಹಸುರು, ಬೂದು, ಯಾ ಕಪ್ಪು ಬಣ್ಣದ) ದ್ರಾಕ್ಷಿ.
  2. = grape-shot.
  3. (ಬಹುವಚನದಲ್ಲಿ) (ಕುದುರೆ ಮೊದಲಾದವುಗಳ ಗೊರಸಿನ ಮೇಲ್ಭಾಗದಲ್ಲಿ ಯಾ ದನಗಳ ಶ್ವಾಸಕೋಶಾವರಣದ ಪೊರೆಯ ಮೇಲೆ ಬೆಳೆಯುವ) ದ್ರಾಕ್ಷಿ ಗೆಡ್ಡೆ; ದ್ರಾಕ್ಷಿ ಗೊಂಚಲಿನಾಕಾರದ ದುರ್ಮಾಂಸ.
ಪದಗುಚ್ಛ
  1. the grape ವೈನು.
  2. the juice of the grape = ಪದಗುಚ್ಛ \((1)\).
ನುಡಿಗಟ್ಟು
  1. sour grapes (ಬಯಸಿದ್ದು ಕೈಗೆಟುಕದಾಗ ಅದನ್ನು ಹಳಿಯುವವನ ವಿಷಯದಲ್ಲಿ ವ್ಯಂಗ್ಯೋಕ್ತಿ) ಬರಿಯ ಹುಳಿದ್ರಾಕ್ಷಿ; ಕೆಲಸಕ್ಕೆ ಬಾರದ ವಸ್ತು.
  2. the grapes are sour = ನುಡಿಗಟ್ಟು \((1)\).