granulation ಗ್ರಾನ್ಯುಲೇಷನ್‍
ನಾಮವಾಚಕ
  1. (ಸಾಮಾನ್ಯ ಅರ್ಥದಲ್ಲಿ) ಕಣವಾಗುವಿಕೆ; ಹರಳಾಗುವಿಕೆ.
  2. (ಮೇಲ್ಮೈ) ತರಿತರಿಯಾಗುವಿಕೆ; ಮಚ್ಚೆಮಚ್ಚೆಯಾಗುವಿಕೆ.
  3. (ಮರದ ವಿಷಯದಲ್ಲಿ) (ಯಾವುದೇ ಮಾದರಿಯ) ಎಳೆಗಳ ರಚನೆ.
  4. ಕಣವಾಗಲ್ಪಡುವಿಕೆ; ಹರಳಾಗಲ್ಪಡುವಿಕೆ.
  5. (ಮೇಲ್ಮೈ) ತರಿತರಿಯಾಗಲ್ಪಡುವಿಕೆ; ಮಚ್ಚೆಮಚ್ಚೆಯಾಗಲ್ಪಡುವಿಕೆ.
  6. (ಮರದ ವಿಷಯದಲ್ಲಿ) ಎಳೆಗಳಾಗಿ ರಚಿಸಲ್ಪಡುವುದು.
  7. (ವಸ್ತುತಃ) ಕಣ; ಹರಳು.
  8. (ಮೇಲ್ಮೈಯ) ತರಕಲು; ಮಚ್ಚೆಮಚ್ಚೆ.
  9. (ಮರದ) ಎಳೆ (ವಿನ್ಯಾಸ.)
  10. (ರೋಗಶಾಸ್ತ್ರ)
    1. (ಗಾಯ ಮಾಯುವಾಗ) ಹುಣ್ಣುಗಳ ಮೇಲೆ ಕಣದಂಥ ಉಬ್ಬುಗಳಾಗಿರುವುದು.
    2. (ಬಹುವಚನದಲ್ಲಿ) ಕಣದಂಥ ಉಬ್ಬುಗಳು.
  11. (ಜೀವವಿಜ್ಞಾನ)
    1. ಕಾಳುಗಟ್ಟುವಿಕೆ; ಗಿಡಗಳು, ಚಿಪ್ಪುಜೀವಿಗಳು, ಮುಂತಾದುವುಗಳ ಹೊರಮೈಮೇಲೆ ಕಾಳುಕಾಳಾಗಿ ಕಣಗಳು ರೂಪುಗೊಳ್ಳುವುದು.
    2. ಹಾಗೆ ಉಂಟಾದ ರಚನೆ ಯಾ ಕಣಗಳು.