See also 2grand
1grand ಗ್ರಾನ್ಡ್‍
ಗುಣವಾಚಕ
  1. (ಅಧಿಕಾರದ ಬಿರುದುಗಳಲ್ಲಿ) ಮಹೋನ್ನತ; ಮಹಾ; ಪ್ರಧಾನ’ ಅತ್ಯುಚ್ಚ; ಎಲ್ಲವಕ್ಕಿಂತ ಮೇಲಿನ: Grand Almoner, Falconer, etc. ಮಹಾ ದಾನಾಧಿಕಾರಿ, ಮಹಾಶ್ಯೇನ ಶಿಕ್ಷಕ (ಮಹಾ ಡೇಗೆಗಾರ), ಮೊದಲಾದವು.
  2. (ನ್ಯಾಯಶಾಸ್ತ್ರ) ದೊಡ್ಡ; ಮಹಾ; ಶ್ರೇಷ್ಠ; ಉನ್ನತ; ಘನವಾದ; ಮಹತ್ವದ; ಮುಖ್ಯ; ಪ್ರಮುಖ; ಪ್ರಧಾನ: grand jury ನ್ಯಾಯದರ್ಶಿಗಳ ಮಹಾಮಂಡಲಿ.
  3. ಅತ್ಯಂತ ಮುಖ್ಯವಾದ; ಪ್ರಮುಖ; ಮಹತ್ವದ; ಮಹತ್ತರ: that is the grand question ಅದೇ ಅತ್ಯಂತ ಮುಖ್ಯ ಪ್ರಶ್ನೆ, ಮಹತ್ವದ ಪ್ರಶ್ನೆ. made a grand mistake ಮಹತ್ತರವಾದ ತಪ್ಪನ್ನು ಮಾಡಿದ.
  4. ಕಟ್ಟಕಡೆಯ; ಅಂತಿಮ; ಒಟ್ಟಿನ; ಸಣ್ಣಪುಟ್ಟ ಅಂಶಗಳನ್ನೆಲ್ಲ ಸೇರಿಸಿದ, ಒಟ್ಟಿಗೆ ಕೂಡಿದ: grand total ಅಖೈರು ಜುಮ್ಲಾ; ಒಟ್ಟು ಮೊತ್ತ; ಮೊತ್ತಗಳ ಮೊತ್ತ. grand finale (ಅಪೆರಾಗಳು, ಕ್ರೀಡಾಕೂಟಗಳು, ಮೊದಲಾದವುಗಳಲ್ಲಿ) ಸಮಾಪ್ತಿ; ಉಪಸಂಹಾರ; ಉಜ್ವಲ ಮುಕ್ತಾಯ: the grand sum or result of his achievements ಅವನ ಎಲ್ಲ ಸಾಧನೆಗಳ ಒಟ್ಟು ಫಲ ಯಾ ಅಂತಿಮ ಪರಿಣಾಮ.
  5. (ದೊಡ್ಡ ಕಟ್ಟಡದ ಭಾಗಗಳನ್ನು ವಿಶೇಷಿಸುವಲ್ಲಿ) ಮುಖ್ಯ; ಮಹಾ; ಪ್ರಧಾನ: the grand staircase, entrance, etc. ಮುಖ್ಯ ಮೆಟ್ಟಲು (ಸಾಲಿನ ಕಟ್ಟಡ) ಭಾಗ, ಮಹಾದ್ವಾರ, ಮೊದಲಾದವು.
  6. (ಹ್ರೆಂಚ್‍ ಪದಗುಚ್ಛಗಳಲ್ಲಿ ಯಾ ಅವುಗಳನ್ನು ಅನುಕರಿಸಿದ ಪ್ರಯೋಗಗಳಲ್ಲಿ) ದೊಡ್ಡ; ಮಹಾ; ಭವ್ಯ: grand army ದೊಡ್ಡ ಸೈನ್ಯ; ಮಹಾಸೇನೆ.
  7. ವೈಭವ; ಸಂಭ್ರಮ ಮೊದಲಾದವುಗಳಿಂದ ಆಚರಿಸಿದ; ಭರ್ಜರಿಯಾದ; ಅದ್ದೂರಿಯಾಗಿ ನಡೆಸಿದ: grand wedding festivities ವೈಭವಯುತ ವಿವಾಹ ಸಮಾರಂಭಗಳು.
  8. (ವ್ಯಕ್ತಿಗಳ, ಅವರ ಸಾಮಾನುಗಳ ವಿಷಯದಲ್ಲಿ) ಸೊಗಸಾದ; ಬಹು ಠೀವಿಯ; ಅತ್ಯಲಂಕಾರದ; ಜಾಜ್ವಲ್ಯಮಾನ; ವೈಭವದಿಂದ ಕೂಡಿದ; ಭರ್ಜರಿ.
  9. ಶ್ರೀಮಂತ ಸಮಾಜಕ್ಕೆ ಸೇರಿದ; ಉನ್ನತ ಸಮಾಜ ವರ್ಗಕ್ಕೆ ಸೇರಿದ; ಪ್ರತಿಷ್ಠಿತ ವರ್ಗಕ್ಕೆ ಸೇರಿದ; ಶ್ರೇಷ್ಠ ವರ್ಗದ.
  10. ಭವ್ಯ; ಸೊಗಸಾದ; ಭಾರಿ; ಬೃಹತ್ತಾದ; ಚೇತೋಹಾರಿ: the scene was grand ದೃಶ್ಯವು ಭವ್ಯವಾಗಿತ್ತು.
  11. (ಕಲ್ಪನೆ, ವಿಷಯ ನಿರೂಪಣೆ, ಯಾ ಶೈಲಿಗಳಲ್ಲಿ) ಗಂಭೀರ; ಘನವಾದ; ಉದಾತ್ತ; ಹವ್ಯ: grand style (ಉದಾತ್ತ ವಿಷಯಗಳಿಗೆ ತಕ್ಕುದಾದ) ಭವ್ಯಶೈಲಿ; ಮಹಾಶೈಲಿ; ಗಂಭೀರ ಶೈಲಿ.
  12. (ವ್ಯಕ್ತಿಗಳ ವಿಷಯದಲ್ಲಿ) ಉದಾತ್ತ ಚಾರಿತ್ರ್ಯದ; ಧೀರೋದಾತ್ತ; ಶ್ರೇಷ್ಠ; ಪೂಜ್ಯ; ಶ್ಲಾಘ್ಯ: a grand old man ಪೂಜ್ಯವೃದ್ಧ; ಪೂಜ್ಯ ಪಿತಾಮಹ.
  13. (ಆಡುಮಾತು) ಅದ್ದೂರಿಯ; ಭರ್ಜರಿ; ಬಹಳ ಒಳ್ಳೆಯ; ತೃಪ್ತಿಕರವಾದ: the ground was in grand condition ನೆಲವು ತುಂಬ ತೃಪ್ತಿಕರವಾದ ಸ್ಥಿತಿಯಲ್ಲಿತ್ತು. a grand time ಅದ್ದೂರಿಯ ಕಾಲ.
  14. (ನೆಂಟತನದ ಹೆಸರುಗಳಲ್ಲಿ) ಒಂದು ತಲೆ ಹಿಂದಿನ ಯಾ ಮುಂದಿನ: grand father ಅಜ್ಜ; ತಾತ. grand son ಮೊಮ್ಮಗ; ಪೌತ್ರ.
ಪದಗುಚ್ಛ
  1. Grand Cross (ಬ್ರಿಟಿಷ್‍ ಪ್ರಯೋಗ) ‘ಗ್ರ್ಯಾಂಡ್‍ ಕ್ರಾಸ್‍’; (ನೈಟ್‍ಹುಡ್‍ ಪದವಿಯ) ಅತ್ಯುನ್ನತ ಪ್ರಶಸ್ತಿ, ಪದಕ.
  2. Grand Fleet (1914–18ರ ಯುದ್ಧದಲ್ಲಿನ) ಪ್ರಧಾನ ಬ್ರಿಟಿಷ್‍ ನೌಕಾಸೇನೆ.
ನುಡಿಗಟ್ಟು

do the grand ಇಲ್ಲದ ದೊಡ್ಡಸ್ತಿಕೆ ತೋರಿಸಿಕೊ; ಮೆರೆ; ಪ್ರತಿಷ್ಠೆ ತೋರಿಸು; ಒಣಜಂಬದಿಂದ ಬೀಗು.

See also 1grand
2grand ಗ್ರಾನ್ಡ್‍
ನಾಮವಾಚಕ
  1. ದೊಡ್ಡ ಪಿಯಾನೊ; ದೊಡ್ಡ ಸಮತಲಾಕಾರದ ಪಿಯಾನೊ ವಾದ್ಯ.
  2. (ಅಶಿಷ್ಟ) (ಬಹುವಚನ ಸಾಮಾನ್ಯವಾಗಿ ಅದೇ). ಒಂದು ಸಾವಿರ ಪೌಂಡುಗಳು, (ಅಮೆರಿಕನ್‍ ಪ್ರಯೋಗ) ಡಾಲರುಗಳು, ಮೊದಲಾದವು.