grammar ಗ್ರಾಮರ್‍
ನಾಮವಾಚಕ
  1. ವ್ಯಾಕರಣ(ಶಾಸ್ತ್ರ).
  2. ವ್ಯಾಕರಣ ಗ್ರಂಥ.
  3. ವ್ಯಾಕರಣ ಶೈಲಿ, ರೀತಿ; ವ್ಯಾಕರಣ ರೂಪಗಳನ್ನು (ವ್ಯಕ್ತಿಯು) ಬಳಸುವ ರೀತಿ.
  4. (ವ್ಯಕ್ತಿಯ) ವ್ಯಾಕರಣ ಪ್ರಯೋಗ; ವ್ಯಾಕರಣಶುದ್ಧವಾದ ಯಾ ಶುದ್ಧವಲ್ಲದ – ಮಾತು ಯಾ ಬರವಣಿಗೆ.
  5. ವ್ಯಾಕರಣ – ಶುದ್ಧವಾದದ್ದು, ಸಮ್ಮತವಾದದ್ದು; ವ್ಯಾಕರಣ ನಿಯಮಗಳ ಪ್ರಕಾರ ಸರಿಯಾದದ್ದು.
  6. ಭಾಷಾ ಮರ್ಯಾದೆ; ಭಾಷಾ ರೂಪಗಳು ಮತ್ತು ಪ್ರಯೋಗಗಳು; ನುಡಿಯ ಶಬ್ದರೂಪಗಳು, ಪ್ರಯೋಗಗಳು: Latin grammar ಲ್ಯಾಟಿನ್‍ ಭಾಷಾ ಮರ್ಯಾದೆ.
  7. ಯಾವುದೇ ಕಲೆಯ ಯಾ ವಿಜ್ಞಾನದ ಮೂಲಾಂಶಗಳು. ಮೂಲತ್ತ್ವಗಳು, ಮೊದಲ ಪಾಠಗಳು.
ಪದಗುಚ್ಛ
  1. comparative grammar ತುಲನಾತ್ಮಕ ವ್ಯಾಕರಣ; ಎರಡು ಯಾ ಹೆಚ್ಚಿನ ಭಾಷೆಗಳ ವ್ಯಾಕರಗಳಿಗಿರುವ ಸಂಬಂಧ ಕುರಿತ ಅಧ್ಯಯನ.
  2. general grammar ಸಾಮಾನ್ಯ ವ್ಯಾಕರಣ ಶಾಸ್ತ್ರ; ತಾತ್ತ್ವಿಕ ವ್ಯಾಕರಣಶಾಸ್ತ್ರ; ಸಾರ್ವತ್ರಿಕ ವ್ಯಾಕರಣಶಾಸ್ತ್ರ; ಎಲ್ಲ ಭಾಷೆಗಳ ವ್ಯಾಕರಣ ಪದ್ಧತಿಗಳಿಗೂ ಆಧಾರವಾಗಿರುವುದೆಂದು ನಂಬಲಾಗಿರುವ ಸಾಮಾನ್ಯ ತತ್ತ್ವಗಳನ್ನು ಕುರಿತ ಶಾಸ್ತ್ರ.
  3. historical grammar ಚಾರಿತ್ರಿಕ ವ್ಯಾಕರಣ; ಐತಿಹಾಸಿಕ ವ್ಯಾಕರಣ; ಒಂದು ಭಾಷೆಯ ಶಬ್ದರೂಪಗಳ ಮತ್ತು ಯೋಜನೆಯ ಬೆಳವಣಿಗೆಯ ಇತಿಹಾಸದ ಅಧ್ಯಯನ.
  4. philosophical grammar = ಪದಗುಚ್ಛ \((2)\).
  5. universal grammar = ಪದಗುಚ್ಛ \((2)\).