grainless ಗ್ರೇನ್‍ಲಿಸ್‍
ಗುಣವಾಚಕ
  1. ಕಾಳಿಲ್ಲದ; ಧಾನ್ಯವಿಲ್ಲದ; ಬೀಜವಿಲ್ಲದ.
  2. (ಸಾಮೂಹಿಕ) ಗೋದಿಯಿಲ್ಲದ; ದವಸವಿಲ್ಲದ; ಕಾಳುಕಡ್ಡಿಯಿಲ್ಲದ.
  3. (ಮರಳು, ಚಿನ್ನ, ಲವಣ, ಕೋವಿಮದ್ದು, ಸುವಾಸನಾದ್ರವ್ಯ, ಮೊದಲಾದವುಗಳ ವಿಷಯದಲ್ಲಿ) ಕಾಳಿಲ್ಲದ; ಹರಳಿಲ್ಲದ; ರವೆಯಿಲ್ಲದ; ಕಣರಹಿತ.
  4. (ಕಾವ್ಯಪ್ರಯೋಗ) ಬಣ್ಣವಿಲ್ಲದ; ವರ್ಣರಹಿತ.
  5. ಮೇಲ್ಮೈ ಒರಟಿಲ್ಲದ; ಮೇಲ್ಮೈ ದೊರಗಾಗಿಲ್ಲದ; ಮೇಲ್ಮೈ – ತರಿತರಿಯಾಗಿಲ್ಲದ, ತರಕಲಾಗಿಲ್ಲದ; ಕಣಕಣ ರಚನೆಯಿಲ್ಲದ.
  6. (ಬಣ್ಣಬಣ್ಣದ) ಚುಕ್ಕೆಯಿಲ್ಲದ; ಮಚ್ಚೆ ಮಚ್ಚೆಯಾಗಿರದ.
  7. (ಮಾಂಸ, ಚರ್ಮ, ಮರ, ಕಲ್ಲು, ಮೊದಲಾದವುಗಳಲ್ಲಿ) ಎಳೆಯಿಲ್ಲದ; ಕಣವಿನ್ಯಾಸವಿಲ್ಲದ.
  8. (ಕಲ್ಲಿದ್ದಲು, ಕಲ್ಲು, ಮೊದಲಾದವುಗಳ ವಿಷಯದಲ್ಲಿ) ಪೊರೆಯೇಳುವ ಪದರಗಳಿಲ್ಲದ; ಪದರರಹಿತ.