grained ಗ್ರೇನ್ಡ್‍
ಗುಣವಾಚಕ
  1. ಕಾಳುಳ್ಳ; ಧಾನ್ಯವುಳ್ಳ; ಬೀಜವುಳ್ಳ.
  2. ಕಣಕಣವಾಗಿರುವ (ಸಾಮಾನ್ಯವಾಗಿ ಸಂಯುಕ್ತಪದಗಳಲ್ಲಿ ಪ್ರಯೋಗ): fine-grained sand ಸಣ್ಣ ಸಣ್ಣ ಕಣಗಳುಳ್ಳ ಮರಳು.
  3. (ಆಕೃತಿ, ರಚನೆ ಯಾ ಮೇಲ್ಮೈಗಳಲ್ಲಿ) ಎಳೆಯೆಳೆಯಾದ – ರಚನೆಯುಳ್ಳ, ವಿನ್ಯಾಸವುಳ್ಳ: wood and other grained materials ಮರ ಮತ್ತು ಇತರ ಎಳೆಯೆಳೆಯಾದ ರಚನೆಯುಳ್ಳ ವಸ್ತುಗಳು.
  4. ಕೃತಕವಾಗಿ ತಯಾರಿಸಿದ ಕಣಕಣವಾಗಿರುವ ರಚನೆ ಯಾ ನಮೂನೆಯುಳ್ಳ. grained kid ಕಣಕಣವಾಗಿರುವ ನಮೂನೆಯ ಮರದ ತೊಟ್ಟಿ.
  5. ಸ್ವಭಾವ, ಸ್ವರೂಪ, ಗುಣಲಕ್ಷಣವುಳ್ಳ (ಸಾಮಾನ್ಯವಾಗಿ ಸಂಯುಕ್ತ ಪದವಾಗಿ ಬಳಕೆ): tough grained journalism ದಿಟ್ಟತನದ ಪತ್ರಿಕಾವೃತ್ತಿ.